ಚಿನ್ಮಯಿಗೆ ಪಂಚಮಸಾಲಿ ನೌಕರರ ಸಂಘದಿಂದ ಸನ್ಮಾನ
Chinmayi honored by Panchamasali Employees Association
ಹೂವಿನ ಹಡಗಲಿ 08: ತಾಲೂಕಿನ ಅಡವಿ ಮಲ್ಲನಕೆರೆ ಗ್ರಾಮದ ಹಡಗಲಿ ಪಟ್ಟಣ ವಾಸಿ ಅರಣ್ಯ ಇಲಾಖೆಯ ನೌಕರ ಗೂಳಿ ಮಲ್ಲಪ್ಪ ನವರ ಸುಪುತ್ರಿ ಕು ಚಿನ್ಮಯಿ ಮಂಗಳೂರು ಆಳ್ವಾಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 98.66 (592) ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದು ಮಲ್ಲಿಗೆ ನಾಡಿಗೆ ಹಾಗೂ ಪಂಚಮಸಾಲಿ ಸಮಾಜಕ್ಕೆ ಕೀರ್ತಿ ತಂದಿರುತ್ತಾಳೆ.
ಈ ಸಾಧನೆ ಮಾಡಿದ ಕು. ಚಿನ್ಮಯಿಗೆ ತಾಲೂಕು ಪಂಚಮಸಾಲಿ ನೌಕರರ ಸಂಘದಿಂದ ಅವರ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಲಾಸಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ವಿ. ಬಿ ಜಗದೀಶ್, ಗೌರವಾಧ್ಯಕ್ಷ ಬಸೆಟ್ಟಿಪ್ರಕಾಶ್, ರಾಜ್ಯ ಸಂಘದ ನಿರ್ದೇಶಕ ಹೆಚ್ ಪಾಟೀಲ್, ಬ್ಯಾಂಕಿನ ನಿರ್ದೇಶಕ ಹೆಚ್ ಕೆ ಮಹೇಶ್, ನೌಕರರ ಸಂಘದ ಪದಾಧಿಕಾರಿಗಳಾದ ಯು.ಹಾಲೇಶ್ ಪಿ ಯೋಗೀಶ್, ಎ ಗುರುಸಿದ್ದಪ್ಪ,ಎನ್ ನಂಜುಂಡಪ್ಪ ಉಪಸ್ಥಿತರಿದ್ದು ಅಬಿನಂದಿಸಿದರು.
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ 