ಬೀಜಿಂಗ್,
ಮಾ 28 , ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ವಿರುದ್ಧ
ಹೋರಾಡಲು ಒಂದು ವೈದ್ಯಕೀಯ ತಂಡ ಕಳುಹಿಸಲಾಗಿದೆ ಎಂದು ಚೀನಾ ವಿದೇಶಾಂಗ ಕಚೇರಿ
ತಿಳಿಸಿದೆ. ರಾಷ್ಟ್ರೀಯ ಆರೋಗ್ಯ ಆಯೋಗ ರಚಿಸಿದ ತಂಡದಲ್ಲಿ ಗ್ಸಿಜಿಯಾಂಗ್
ಸ್ವಾಯತ್ತ ಪ್ರದೇಶದ ಆರೋಗ್ಯ ಆಯೋಗ ಆಯ್ಕೆ ಮಾಡಿದ ತಜ್ಞರನ್ನು ಒಳಗೊಂಡಿದೆ ಎಂದು
ವಿದೇಶಾಂಗ ಸಚಿವಾಲಯ ವಕ್ತಾರ ಜೆಂಗ್ ಶ್ಯುಯಾಂಗ್ ಪತ್ರಿಕಾ ಹೇಳಿಕೆಯಲ್ಲಿ
ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಈ ತಂಡ ಪಾಕಿಸ್ತಾನಕ್ಕೆ ಪಯಣ ಆರಂಭಿಸಿದೆ. ಪಾಕಿಸ್ತಾನದಲ್ಲಿ 1373 ಮಂದಿಗೆ ಸೋಂಕು ತಗುಲಿದ್ದು, 11 ಜನರು ಮೃತಪಟ್ಟಿದ್ದಾರೆ.