ಚೀನಾದಲ್ಲಿ 24 ಗಂಟೆಗಳಲ್ಲಿ 31 ಹೊಸ ಆಮದು ಕರೋನ ಪ್ರಕರಣ ದಾಖಲು

ಬೀಜಿಂಗ್, ಎಪ್ರಿಲ್ 3, ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ   31 ಹೊಸ ಆಮದು ಪ್ರಕರಣಗಳು ದಾಖಲಾಗಿದೆ. ಈ ಪೈಕಿ  ನಾಲ್ಕು ಜನರು ಈ ಸೊಂಕಿನಿಂದ  ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ತಿಳಿಸಿದೆ.ಚೀನಾದಲ್ಲಿ ಆಮದು ಮಾಡಿಕೊಂಡ ಕರೋನ ಸೋಂಕಿತರ  ಪ್ರಕರಣಗಳ ಸಂಖ್ಯೆ 870 ತಲುಪಿದೆ."ರಾಷ್ಟ್ರೀಯ ಆರೋಗ್ಯ ಆಯೋಗವು 31 ಪ್ರಾಂತ್ಯಗಳಿಂದ [ಪ್ರದೇಶಗಳು ಮತ್ತು ಪುರಸಭೆಗಳಿಂದ] ಹೊಸ ರೀತಿಯ ಕರೋನವೈರಸ್ನಿಂದ ಉಂಟಾದ 81,620 ನ್ಯುಮೋನಿಯಾ ಪ್ರಕರಣಗಳ ಬಗ್ಗೆ ಮಾಹಿತಿ  ಪಡೆದುಕೊಂಡಿದೆ. ಇದರಲ್ಲಿ ಪ್ರಸ್ತುತ 1,727 ಜನರು ಅಸ್ವಸ್ಥರಾಗಿದ್ದಾರೆ. 379 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ, 3,322 ಮಂದಿ ಸಾವನ್ನಪ್ಪಿದ್ದಾರೆ, 76,571 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ”ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿರುವ ವುಹಾನ್ ನಗರ ಇರುವ ಹುಬೈ ಪ್ರಾಂತ್ಯದಲ್ಲಿ  ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.