ಕೊರೊನಾ ವೈರಸ್ ಸೋಂಕಿನ ಮೂಲ ಚೀನಾ ಅಲ್ಲ, ಸಿಂಗಾಪುರ....!!

ಬೀಜಿಂಗ್ ,  ಫೆ  12 :     ಇಡೀ ವಿಶ್ವವನ್ನೇ  ಬೆಚ್ಚಿಬೀಳಿಸಿರುವ  ಕೊರೊನಾ ವೈರಸ್  ಸೋಂಕಿನ ಮೂಲ ಚೀನಾ  ಅಲ್ಲ, ಸಿಂಗಾಪುರ ಎಂದು 'ದ ಗಾರ್ಡಿಯನ್' ಪತ್ರಿಕೆಯ ಹೊಸ ತನಿಖಾ ವರದಿ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ.  

2019ರಲ್ಲಿ ಸಿಂಗಾಪು ರಕ್ಕೆ ಭೇಟಿ ನೀಡಿದ್ದ ಲಂಡನ್ ಮೂಲದ, 50 ವರ್ಷ ವಯಸ್ಸಿನ ಉದ್ಯಮಿ ಯೊಬ್ಬರಿಂದ (ಹೆಸರು ತಿಳಿಸಿಲ್ಲ) ಈ ವೈರಸ್ ಸೋಂಕು ದೇಶಗಳ 11 ಜನರಿಗೆ ಹರಡಿದೆ  ಎಂದೂ ಪತ್ರಿಕೆ ವರದಿಯಲ್ಲಿ ಹೇಳಲಾಗಿದೆ.

'ಸಿಂಗಾಪುರದಲ್ಲಿ 2019ರ ಫೆ. 20ರಿಂದ 21ರವರೆಗೆ ನಡೆದ ವಾಣಿಜ್ಯ ಸಂಬಂಧಿ ಸಮ್ಮೇಳನವೊಂದರಲ್ಲಿ ಅವರು ಪಾಲ್ಗೊಂಡಿದ್ದರು.  100ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದ ಆ ಸಮ್ಮೇಳನದಲ್ಲೇ ಅವರಿಗೆ ಸೋಂಕು ತಗುಲಿತ್ತು. ಅವರೇ ಈ ವೈರಸ್  ಮೊದಲ ಸೋಂಕಿತರು. ಮೂಲ ಕಾರಣಿಭೂತರು ಎನ್ನಲಾಗಿದೆ.

 ಅಲ್ಲಿಂದ ಮೂರು ದೇಶಗಳಿಗೆ ತೆರಳಿದ್ದ ಅವರಿಂದಲೇ ಆ ಸೋಂಕು ಫ್ರಾನ್ಸ್ ಮತ್ತಿತರೆ ದೇಶಗಳಿಗೆ  ಕಡೆಗೆ ಹಬ್ಬಿದೆ . ಆ ಉದ್ಯಮಿ ಪ್ರಸ್ತುತ  ಲಂಡನ್ ನಲ್ಲೇ  ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂದೂ  ವಿವರಿಸಲಾಗಿದೆ.