ಟೊರಾಂಟೋ, ಏ 3, ಕೊರೊನಾ ಸೋಂಕು ಕುರಿತ ಸರಿಯಾದ ಅಂಕಿಅಂಶಗಳನ್ನು ಚೀನಾ ನೀಡಿಲ್ಲ ಎಂಬ ಆರೋಪ ನಿರಾಧಾರ ಎಂದು ಕೆನಡಾ ಆರೋಗ್ಯ ಸಚಿವ ಪಟ್ಟಿ ಹಜ್ಜು ಹೇಳಿದ್ದಾರೆ. ಸೋಂಕು ಕುರಿತಂತೆ ಸಂಪುಟ ಸಚಿವರ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚು ವ್ಯಾಪಿಸಿದ್ದು ಚೀನಾ ತಪ್ಪು ಮಾಹಿತಿ ನೀಡಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಚೀನಾದ ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪಿದವರ ಸಂಖ್ಯೆ ಸುಳ್ಳು ಎಂಬುದು ನಿರಾಧಾರ ಎಂದು ಹೇಳಿದರು.ಚೀನಾ ವಾಸ್ತವ ಅಂಶಗಳನ್ನು ಮುಚ್ಚಿದ್ದು ಸೋಂಕಿತರ ಮತ್ತು ಮೃತರ ಸಂಖ್ಯೆ ಹೆಚ್ಚಿರುವುದು ದೃಢಪಟ್ಟಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿತ್ತು. ಚೀನಾ ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿತ್ತು.ಗುರುವಾರದ ವೇಳೆಗೆ ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ ದಾಟಿದ್ದು 51 ಸಾವಿರಕ್ಕೂಹೆಚ್ಚು ಜನರು ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು 236000 ಸಾವಿರ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.