ಬೀಜಿಂಗ್, ಫೆ 24, ಚೀನಾದಲ್ಲಿ ಮಾರಕ ಕೊರೊನಾವೈರಸ್ ನಿಂದ ಮೃತಪಟ್ಟರ ಸಂಖ್ಯೆ 2,592 ಕ್ಕೆ ಏರಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 77,150 ಕ್ಕೆ ಮುಟ್ಟಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ. ಸೋಂಕಿನಿಂದ ಇದುವರೆಗೆ 24,734 ಜನರು ಚೇತರಿಸಿಕೊಂಡಿದ್ದಾರೆ. ಮಾರಣಾಂತಿಕ ನ್ಯುಮೋನಿಯಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ 49,824 ರೋಗಿಗಳ ಪೈಕಿ 9,915 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆಯೋಗದ ಇತ್ತೀಚಿನ ಅಂಕಿಅಂಶಗಳು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 409 ಹೊಸ ಕೊರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, 150 ಹೊಸ ಸಾವು ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕೊರೊನವೈರಸ್ ನ ಕೇಂದ್ರಬಿಂದುವಾಗಿರುವ ಹುಬೈ ಪ್ರಾಂತ್ಯವೊಂದರಲ್ಲೇ 149 ಪ್ರಕರಣಗಳು ವರದಿಯಾಗಿವೆ.