ಗೌಜೌಗೌ, ಏ 11, ಚೀನಾದ ಗ್ಯುಯಾಂಗ್ಡಾಂಗ್ ಪ್ರಾಂತ್ಯದಲ್ಲಿ ಹೆಬೋ ಬಂದರಿನಲ್ಲಿ ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ನಾಲ್ವರು ಕಣ್ಮರೆಯಾಗಿದ್ದಾರೆ.ಒಂದು ದೋಣಿ ಮಗುಚಿ ಬಿದ್ದಿದ್ದು ಹನ್ನೊಂದು ಜನರು ಸಮುದ್ರದಲ್ಲಿ ಸಿಲುಕಿದ್ದು ಏಳು ಜನರನ್ನು ರಕ್ಷಿಸಲಾಯಿತು. ನಾಲ್ವರು ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯ ಶೋಧ ಮತ್ತು ಪರಿಹಾರ ಕೇಂದ್ರ ತಿಳಿಸಿದೆ.
ಒಂದು ಹೆಲಿಕಾಫ್ಟರ್ ಮತ್ತು ಏಳು ಬೋಟುಗಳಲ್ಲಿ ಕಾಣೆಯಾದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಹೇಳಿದೆ.