ಬೀಜಿಂಗ್, ಫೆ 24, ಅಮೆರಿಕ ಡಾಲರ್ ಎದುರು ಚೀನಾದ ಕರೆನ್ಸಿ ಯುವಾನ್ ಮೌಲ್ಯ ಸೋಮವಾರ 36 ಪಿಪ್ಸ್ ಇಳಿಕೆಯಾಗಿ ಒಂದು ಡಾಲರ್ ಬೆಲೆ 7.0246 ಯುವಾನ್ ನಷ್ಟಿದೆ ಎಂದು ಚೀನಾದ ವಿನಿಮಯ ಕೇಂದ್ರ ತಿಳಿಸಿದೆ. ಚೀನಾದ ಸ್ಪಾಟ್ ಎಕ್ಸ್ ಚೇಂಗ್ ವಿನಿಮಯ ಬೆಲೆ ಪ್ರತಿ ವಹಿವಾಟಿನ ದಿನವೂ ಪ್ಯಾರಿಟಿ ರೇಟ್ ಗಿಂತ ಶೇ 2 ರಷ್ಟು ಏರಿಕೆ ಅಥವಾ ಇಳಿಕೆಯಾಗಬಹುದಾಗಿದೆ. ಪ್ರತಿದಿನದ ಅಂತರ ಬ್ಯಾಂಕ್ ಮಾರುಕಟ್ಟೆ ವಹಿವಾಟು ಆರಂಭಕ್ಕೂ ಮುನ್ನ ಅಮೆರಿಕ ಡಾಲರ್ ಎದುರಿನ ಯುವಾನ್ ಮೌಲ್ಯ ನಿರ್ಧರಿತವಾಗುತ್ತದೆ.