ಬೀಜಿಂಗ್,
ಮಾರ್ಚ್ 31, ಚೀನಾದಲ್ಲಿ ಕ್ಷಿಪ್ರಗತಿಯಲ್ಲಿ ವ್ಯಾಪಕವಾಗಿ ಹರಡಿದ ಕೊರೊನಾ ವೈರಾಣು
ಸೋಂಕಿನಿಂದ ಇಡೀ ಮಾರುಕಟ್ಟೆ ಸ್ತಬ್ಧವಾಗಿತ್ತು. ಇದೀಗ ಚೀನಾದ ತಯಾರಿಕಾ ವಲಯ ಪುನಃ
ಕಾರ್ಯಾರಂಭ ಮಾಡಿದೆ.ಚೀನಾದ ಬಹುತೇಕ ಕಡೆ ತಯಾರಿಕಾ ವಲಯ ಕಾರ್ಯಾರಂಭ ಮಾಡಿದೆ ಎಂದು
ನ್ಯಾಷನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ವಕ್ತಾರರು ತಿಳಿಸಿದ್ದಾರೆ. ಇದು ಆರ್ಥಿಕತೆ
ಚೇತರಿಕೆಯ ಯಶಸ್ವಿ ಪ್ರಯತ್ನದ ಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಚೀನಾದ
ಆರ್ಥಿಕತೆ ಸಹಜ ಸ್ಥಿತಿಗೆ ಬಂದಿದೆ ಎಂದು ಹೇಳಲಾಗುವುದಿಲ್ಲ. ಒಂದು ತಿಂಗಳ ಉತ್ಪಾದನಾ
ಆಧಾರದ ಮೇಲೆ ಅದನ್ನು ಹೇಳಲೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿನ ಚೇತರಿಕೆಯ ಮೇಲೆ
ಆರ್ಥಿಕತೆಯ ಪ್ರಗತಿ ನಿಂತಿದೆ ಎಂದು ಅವರು ಹೇಳಿದ್ದಾರೆ.ಆದಾಗ್ಯೂ ಜಾಗತಿಕ ಆರ್ಥಿಕತೆಯೂ
ಕುಸಿಯುತ್ತಿದ್ದು ಈಗಿನ ಚೇತರಿಕೆ ಅಲ್ಪಕಾಲಿಕವಾಗಿದೆ. ಅನೇಕ ಆರ್ಥಿಕ ತಜ್ಞರು
ವಿಶ್ವವ್ಯಾಪಿ ದೀರ್ಘಕಾಲಿನ ಆರ್ಥಿಕ ಕುಸಿತ ಇರಲಿದೆ ಎಂದು ಅಂದಾಜಿಸಿದ್ದು ಚೀನಾ
ಆರ್ಥಿಕತೆ ಚೇತರಿಕೆ ಸುಲಭವೇನಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ
ಚೀನಾದಲ್ಲಿ ಸೋಮವಾರ ಕೊರೊನಾ ಸೋಂಕಿನ ಸ್ಥಳೀಯ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.
ಆದರೆ 48 ಪ್ರಕರಣಗಳು ವಿದೇಶದಿಂದ ಬಂದಿರುವವರಲ್ಲಿ ಕಂಡುಬಂದಿದೆ ಎಂದು ಅಲ್ಲಿನ ಆರೋಗ್ಯ
ಪ್ರಾಧಿಕಾರ ಮಾಹಿತಿ ನೀಡಿದೆ.