ಸ್ಯಾಂಟಿಗೊ, ನ 05: ಚಿಲಿಯಲ್ಲಿ ಒಂದೆಡೆ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿದ್ದು, ಮತ್ತೊಂದೆಡೆ ಸಂಭವಿಸಿದ 6.0 ತೀವ್ರತೆಯ ಭೂಕಂಪದಿಂದಾಗಿ ರಾಜಧಾನಿಯಲ್ಲಿನ ಬೃಹತ್ ಕಟ್ಟಡಗಳು ಕಂಪಿಸಿವೆ. 31.8222 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 71.3664 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ ಕೇಂದ್ರೀಕೃತವಾಗಿರುವ ಟೆಂಬ್ಲರ್ ನಲ್ಲಿ 496.06 ಕಿಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವಿತ್ತು ಎಂದು ಚಿಲಿಯ ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. ಭೂಕಂಪದಿಂದ ಈವರೆಗೂ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಗಳು ಬಂದಿಲ್ಲ ಎಂದು ರಾಷ್ಟ್ರೀಯ ತುರ್ತು ಕಚೇರಿ ತಿಳಿಸಿದೆ. ಏತನ್ಮಧ್ಯೆ ಚಿಲಿ ಸರ್ಕಾರದ ಕಠಿಣ ನೀತಿಗಳ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.