ಹಾಸ್ಯ ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳು
Children who won the humorous speech competition
ಲೋಕದರ್ಶನ ವರದಿ

ಬೆಳಗಾವಿ 17: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯವರು ಇದೇ ದಿ. 14 ಶನಿವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ‘ಹಾಸ್ಯ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು.
ಬೇರೆ ಬೇರೆ 7 ಶಾಲೆಗಳಿಂದ ಒಟ್ಟು 14 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಬಿ. ಕೆ. ಮಾಡೆಲ್ ಪ್ರೌಢಶಾಲೆಯ ರಮೇಶ ಕಮ್ಮಾರ (ಪ್ರಥಮ), ಕೆ.ಎಲ್.ಇ. ಪ್ರೌಢಶಾಲೆ ನಿಖಿಲ ಮಾಶೆಟ್ಟಿ (ದ್ವಿತೀಯ ಬಹುಮಾನ) ಮತ್ತು ಮಚ್ಚೆಯ ಗೋಮಟೇಶ ಕನ್ನಡ ಪ್ರೌಢಶಾಲೆಯ ಪ್ರಜ್ವಲ ಜೆಕಬಾಲ (ತೃತೀಯ ಬಹುಮಾನ) ಪಡೆದುಕೊಂಡರು. ಕ್ರಮವಾಗಿ ರೂ. 1000, ರೂ.700 ಮತ್ತು ರೂ. 500 ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ರಂಜನಾ ನಾಯಕ ಮತ್ತು ಭಾರತಿ ವಡವಿ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು. ಹಿರಿಯ ಲೇಖಕ ಪಿ. ಬಿ. ಸ್ವಾಮಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ‌್ಯಕ್ರಮದ ಪ್ರಾಯೋಜಕತ್ವವನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹಿರಿಯ ಲೆಕ್ಕ ಪರಿಶೋಧಕ ಉದಯ ಕುಮಾರ ವನಕುದ್ರೆ ವಹಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳದ ಗೌರವ ಕಾರ‌್ಯದರ್ಶಿ ರಾಮಚಂದ್ರ ಕಟ್ಟಿ, ಹಾಸ್ಯಕೂಟದ ಸಂಚಾಲಕ ಗುಂಡೇನಟ್ಟಿ ಮಧುಕರ ಮತ್ತು ಎಂ. ಬಿ. ಹೊಸಳ್ಳಿ, ತಾನಾಜಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 