ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸುವ ಕೆಲಸ ಆಗಬೇಕು
Children should be encouraged to learn.
ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸುವ ಕೆಲಸ ಆಗಬೇಕು
ಹೂವಿನ ಹಡಗಲಿ 27: ಶಿಕ್ಷಕ ವೃತ್ತಿ ಪವಿತ್ರ. ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಕೆಲಸ ಆಗಬೇಕು ಎಂದು ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಎಂ ನೆಪೋಲಿಯನ್ ಹೇಳಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬಿ ಇ ಡಿ ಪ್ರಶಿಕ್ಷಣ ವಿದ್ಯಾರ್ಥಿಗಳ ಬೋಧನಾ ತರಗತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಬರೀ ಪಠ್ಯ ವಿಷಯಕ್ಕೆ ಸೀಮಿತವಾಗಿದೆ ಸೃಜನಾತ್ಮಕ ಓದು ಬರವಣಿಗೆಯಿಂದ ಬೋಧನೆಯಲ್ಲಿ ಪ್ರೌಢಿಮೆ ಸಾಧಿಸಲು ಸಾಧ್ಯ. ಕನ್ನಡ ಸಾಹಿತ್ಯ ವಿಜ್ಞಾನ ಸಮಾಜ ವಿವಿಧ ವಿಷಯಗಳ ಆಳವಾದ ಅಧ್ಯಯನ ಮಾಡಿ ಎಂದು ತಿಳಿಸಿದರು.ಬಿ ಇ ಡಿ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಬೋಧನೆಯಲ್ಲಿ ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಿರಿ ಎಂದು ಹೇಳಿದರು.ವಿಜ್ಞಾನ ಶಿಕ್ಷಕಿ ಗೀತಾ ಪಿ ಎಂ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದರು.ಮುಖ್ಯ ಗುರು ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಬಸಪ್ಪ ಕೆ ಲಂಬಾಣಿ ಗಿಡ್ಡಾನಾಯ್ಕ್ ಪ್ರತಿಮಾ ಎನ್ ಎಸ್ ರೇಖಾ ಹರೀಶ್, ಸಂತೋಷ್ ಕುಮಾರ್ ಇತರರು ಇದ್ದರು.ಪಾಠ ಬೋಧನೆಗೆ ಅನುಗುಣವಾಗಿ ನೆಡಿಸಿದ ವಿವಿಧ ವಿಷಯಗಳ ಘಟಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪುಸ್ತಕ ಲೇಖನಿ ಬಹುಮಾನ ವಿತರಿಸಲಾಯಿತು.ಬಿ ಇ ಡಿ ಪ್ರಶಿಕ್ಷಣ ವಿದ್ಯಾರ್ಥಿಗಳಾದ ಕೆಂಚಪ್ಪ, ಮಂಜುನಾಥ, ಐಶ್ವರ್ಯ ಹುಲಿಗೆಮ್ಮ, ಪೂಜಾ, ಪ್ರೀತಿ, ರವಿಕುಮಾರ್ ಪೂಜಾರ, ಪುನೀತ್ ಕುಮಾರ್, ಪವಿತ್ರ, ರಾಜೇಶ್ವರಿ,ನಾಗರತ್ನ ತಮ್ಮ ಬೋಧನೆಯ ಅನುಭವ ಹಂಚಿಕೊಂಡರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 