ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದು! ಪಾಲಕರು ಮಕ್ಕಳನ್ನು ಅನುಸರಣೆ ಮಾಡಿ : ಶಾಸಕ ಪಠಾಣ
Children are falling prey to addiction! Parents should follow their children: MLA Pathana
ಶಿಗ್ಗಾವಿ 23 : ಇಂದಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಆದ್ದರಿಂದ ಪಾಲಕರು ಮಕ್ಕಳನ್ನು ಅನುಸರಣೆ ಮಾಡಬೇಕು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ಲಕ್ಕಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮೊದಲಿಗೆ ಮಕ್ಕಳು ತಂದೆ ತಾಯಿಗಳ ಮಾತನ್ನು ಯಥಾವತ್ತಾಗಿ ಕೇಳುತ್ತಿದ್ದರು ಆದರೆ ಇಂದು ಪಾಲಕರ ಪೋಷಕರ ಮಾತು ಕೇಳುವುದು ಕಷ್ಷವಾಗಿದೆ ಕಾರಣ ಸ್ವತಂತ್ರವಾಗಿ ಇರಬೇಕು ಯಾರ ಮಾತು ಕೇಳಬಾರದು ಎಂಬ ಮನೋಭಾವನೆಗೆ ಒಳಗಾಗಿದ್ದಾರೆ ಆದ್ದರಿಂದ ಮಕ್ಕಳಿಗೋಸ್ಕರ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕಿನ ಕುರಬರ ಸಮಾಜದ ಅಧ್ಯಕ್ಷ ಚಂದ್ರಶೇಖರ ಮಾಯಣ್ಣವರ, ಗ್ರಾಮ ಪಂಚಾಯತ್ ಸದಸ್ಯ ಚನ್ನಮ್ಮ ರಾಗಿ, ಯಲ್ಲಪ್ಪ ಬಾಳಣ್ಣವರ, ನಿಂಗಪ್ಪ ಗೊರವರ, ನ್ಯಾಯವಾದಿ ಬಸವರಾಜ ರಾಗಿ , ಎಸ್ ಡಿಎಮ್ ಸಿ ಅಧ್ಯಕ್ಷ ಶಿವಪುತ್ರ್ಪ ಗೊರವರ ಸೇರಿದಂತೆ ಸದಸ್ಯರು ಹಾಗೂ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 