ಬಿರುಬಿಸಿಲಿನಲ್ಲಿ ಮಕ್ಕಳು, ವಯೋವೃದ್ಧರು ಅನಾವಶ್ಯಕ ತಿರುಗಾಡಬೇಡಿ: ಸಂಜಯ ಇಂಗಳೆ

Children and the elderly should not roam around unnecessarily in the scorching sun: Sanjay Ingale

ಲೋಕದರ್ಶನ ವರದಿ 

ಬಿರುಬಿಸಿಲಿನಲ್ಲಿ ಮಕ್ಕಳು, ವಯೋವೃದ್ಧರು ಅನಾವಶ್ಯಕ ತಿರುಗಾಡಬೇಡಿ: ಸಂಜಯ ಇಂಗಳೆ  

ಚಡಚಣ 18: ತಾಲೂಕಿನಲ್ಲಿ ಮೇಲಿಂದ ಮೇಲೆ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಈ ವರ್ಷ ತಾಪಮಾನ ಹೆಚ್ಚಾಗಿರುವದೆಂದು(ಹಾಟ್ ವ್ಹೇವ್)ಬಿಸಿಗಾಳಿ ಬೀಸುತ್ತಿರುವದರಿಂದ ಪ್ರಕೃತಿ ವಿಕೋಪ ಇಲಾಖೆಯವರು ಹೇಳಿರುವದರಿಂದ ಎಲ್ಲ ಸಾರ್ವಜನಿಕರು ಜಾಗರೂಕರಾಗಿರಬೇಕೆಂದು ಅದಲ್ಲದೆ ಎಲ್ಲ ಅಂಗಡಿಕಾರರು ವಿಶೇಷವಾಗಿ ಬಟ್ಟೆ ವ್ಯಾಪಾರಿಗಳು, ಪ್ಲಾಸ್ಟಿಕ್ ವ್ಯಾಪಾರಿಗಳು, ಬ್ಯಾಟರಿ ಮಾರಾಟ ಮಾಡುವ ಸ್ಟೇಶನರಿ ವ್ಯಾಪಾರಸ್ಥರು ಸೇರಿದಂತೆ ಎಲ್ಲ ವ್ಯಾಪಾರಸ್ಥರು ಅಗ್ನಿಅವಘಡದಿಂದ ತಪ್ಪಿಸಿಕೊಳ್ಳಲು ಮುಂಜಾಗೃತ ಕ್ರಮಗಳಾದ ಅಗ್ನಿ ನಂದಿಸುವ (ಫೈರ್ ಎಷ್ಟಿಂಗುಷರ್) ಸಾಧನಗಳನ್ನು ಇಟ್ಟುಕೊಳ್ಳಬೇಕೆಂದು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಹೇಳಿದರು. 

ಅದಲ್ಲದೆ ಪ್ರಕೃತಿ ವಿಕೋಪ ಇಲಾಖೆಯಿಂದ (ಹಾಟ್ ವ್ಹೇವ್)ಬಿಸಿಗಾಳಿ ಬೀಸುತ್ತಿರುವದರಿಂದ ವಯೋವೃದ್ಧರು 60 ವರ್ಷ ಮೇಲ್ಪಟ್ಟವರು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲಲ್ಲಿ ಅಡ್ಡಾಡಬಾರದು ಆದಷ್ಟು ನೆರಳಲ್ಲಿ ಇರಬೇಕೆಂದರು. ಚಿಕ್ಕ ಮಕ್ಕಳು ಹಾಗು ಮಹಿಳೆಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಮ. 12ಗಂಟೆಯಿಂದ ಸಂಜೆ 4ಗಂಟೆಯವರೆಗೆ ಅನಾವಶ್ಯಕ ಬಿಸಿಲಲ್ಲಿ ಅಡ್ಡಾಡಬಾರದು ಎಂದು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಪತ್ರಿಕಾಗೋಷ್ಟಿಯಲ್ಲಿ ಕರೆ ನೀಡಿದರು.