ಗುಳೇದಗುಡ್ಡ03; ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುವಲ್ಲಿ ಈ ಶಿಕ್ಷಣ ಸಂಸ್ಥೆ ಶ್ರಮೀಸುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳೆ ಆಸ್ತಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ ಹೇಳಿದರು.
ಅವರು ಇಲ್ಲಿಯ ಕಾಂಚನೇಶ್ವರಿ ವಿದ್ಯಾವರ್ಧಕ ಸಂಸ್ಥೆಯ ಪ್ರೌಢ ಶಾಲೆ ಕೆಂಬ್ರೀಜ್ ಪಬ್ಲೀಕ್ ಶಾಲೆೆಯ ವಾಷರ್ಿಕೋತ್ಸವ ಮತ್ತು 10ನೇ ತರಗತಿ ವಿದ್ಯಾರ್ಥಿ ಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ,ಜಿಪಂ ಮಾಜಿ ಸದಸ್ಯೆ ರೇಣುಕಾ ಗುಡ್ಡದ ಅಧ್ಯಕ್ಷತೆವಹಿಸಿದ್ದರು. ವೈ.ಎಸ್.ಗುಡ್ಡದ, ಬಾಲಕಿಯರ ಪದವಿ ಪೂರ್ವ ಕಾಲೇಜ ಉಪನ್ಯಾಸಕ ಸದಾಶಿವ ಸೂಳಿಭಾವಿ ಮಾತನಾಡಿದರು.
ಮಕ್ಕಳ ತಾಯಂದಿರರಿಗೆ ಏರ್ಪಡಿಸಿದ್ದ ನಾನಾ ಸ್ಪರ್ಧಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂ.ಎಸ್.ಉಂಕಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ವೈ.ಗುಡ್ಡದ, ಸುನೀತಾ ಎಸ್.ಕಠಾರಿಯಾ, ಲಕ್ಷ್ಮೀ ಜೀವನಗಿ, ಐಶ್ವರ್ಯ ಶೀಪ್ರಿ, ಸಂದೀಪ ಮಾದರ, ಐಶ್ವರ್ಯ ಜಂಗಮಠ,ವಿಠ್ಠಲ ಸತ್ಯನಗೌಡರ, ಹುಸೇನಸಾಬ್ ನದಾಫ್ ಇದ್ದರು.