ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ವೀಣಾ ಪಾಟೀಲ
Children's interests should be identified and encouraged: Veena Patil
ಲೋಕದರ್ಶನ ವರದಿ
ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ವೀಣಾ ಪಾಟೀಲ
ಗದಗ 12: ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿ ಈಗ ದಶಕದ ಸಂಭ್ರಮದಲ್ಲಿದೆ ಆದರೆ, ಈ ಸಂಸ್ಥೆ ಇಷ್ಟೊಂದು ಸಾಧನೆ ಮಾಡಲು ಇದರ ಹಿಂದೆ ಸಾಕಷ್ಟು ಶ್ರಮವಿದೆ ಎಂದು ಲೇಖಕಿ ಹಾಗೂ ಮುಂಡರಗಿಯ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ವೀಣಾ ಪಾಟೀಲ ಅವರು ಹೇಳಿದರು.
ನಗರದ ಪಂ. ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಇತ್ತಿಚಿಗೆ ಜರುಗಿದ ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ ದಶಕದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಕುಣಿಯುವ ಮಕ್ಕಳ ಸಂಭ್ರಮ ನೋಡಲು ಎಲ್ಲ ಪಾಲಕರಿಗೂ ಎಲ್ಲಲ್ಲಿದ ಸಂತೋಷ ಅದ್ದರಿಂದ ಮಕ್ಕಳ ಈ ಕಾರ್ಯಕ್ರಮಕ್ಕೆ ಜೀವಕಳೆ ಬಂದಿದೆ. 3 ರಿಂದ 8 ವರ್ಷದ ಮಕ್ಕಳಿಗೆ ಎನೇ ಹೇಳಿದರು ಅದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. 9 ವರ್ಷದ ನಂತರ ತಮ್ಮ ಆಸಕ್ತಿಗನುಗುಣವಾಗಿ ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ 10-13 ವರ್ಷದ ಮಕ್ಕಳು ತಮ್ಮ ಇಷ್ಟದಂತೆ ಬದುಕುತ್ತಾರೆ. ಮಕ್ಕಳ ಉತ್ತಮ ಪ್ರಯತ್ನಕ್ಕೆ ಪಾಲಕರು ಸಹಕಾರ ನೀಡಬೇಕು ಎಂದು ಹೇಳಿದರು.
ನಗರದ ಸ್ಪರ್ಶ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಡಾ. ಪ್ರಭಾ ದೇಸಾಯಿ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದ ಅವರು ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯು 1 ವಿದ್ಯಾರ್ಥಿಯಿಂದ ಅರಂಭವಾದ ಈ ಸಂಸ್ಥೆಯಲ್ಲಿ ಈಗ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಟ್ಯವನ್ನು ಕಲಿಯುತ್ತಿದ್ದಾರೆ. ಈ ಅಕಾಡೆಮಿಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಮುಳಗುಂದದ ಖ್ಯಾತ ವೈದ್ಯರಾದ ಡಾ. ಎಸ್.ಸಿ.ಚವಡಿ ಅವರು ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಉಳಿಸಿ, ಬೆಳೆಸುವ ಜವಾಬ್ದಾರಿ ಮಕ್ಕಳ ಮೇಲಿದೆ. ಜಿಲ್ಲೆಯ ವಿವಿದ ಭಾಗಗಳಲ್ಲಿ ಶಾಖೆಗಳನ್ನು ತೆರೆದು ಮಕ್ಕಳಿಗೆ ಉತ್ತಮವಾಗಿ ತರಬೇತಿ ನೀಡುತ್ತಿದ್ದಾರೆ. ಮಕ್ಕಳಿಗೆ ಕಲೆಯನ್ನು ಕಲಿಸುವದು ಸುಲಭವಾದ ಕೆಲಸವಲ್ಲ ಮುಂದಿನ ದಿನಗಳಲ್ಲಿ ನಾನೂ ಕೂಡಾ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೆನೆ. ಭಾವ-ರಾಗ-ತಾಳ ಸೇರಿದರೆ ನೃತ್ಯ ಎನಿಸುತ್ತದೆ ಅವುಗಳನ್ನು ಅಳವಡಿಸಿಕೊಂಡಿರುವ ಮಕ್ಕಳ ನೃತ್ಯ ನೋಡುವದು ಚಂದ ಎಂದು ಹೇಳಿದರು.
ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವದ ಕಾರ್ಯಾಧ್ಯಕ್ಷರಾದ ಫಕ್ಕೀರ್ಪ ಹೆಬಸೂರ ಅವರು ಮಾತನಾಡಿ, ಸಂಗೀತ ಸಾಹಿತ್ಯ, ಕಲೆಗೆ ಹೆಸರಾದ ಗದಗ ಜಿಲ್ಲೆಗೆ ನಿಮಿಷಾಂಬ ನಾಟ್ಯ ಅಕಾಡೆಮಿ ತನ್ನದೆಯಾದ ಹೊಸದೊಂದು ಅದ್ಯಾಯ ಬರೆದಿದೆ. ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿರುವದಲ್ಲದೆ, ಹಿಂದಿನ ಕಲೆಯನ್ನು ಉಳಿಸಿಕೊಂಡು ಹೋಗಲು ಮಕ್ಕಳಿಗೆ ಪ್ರೇರಣೆ ನೀಡುತ್ತಿರುವುದು ಪ್ರಶಂಸನೀಯವಾಗಿದೆ. ಮಕ್ಕಳ ಕನಸಿನ ಗುರಿಗೆ ಪಾಲಕರ ಆಶಿರ್ವಾದ ಮುಖ್ಯವಾಗಿದೆ. ಮಕ್ಕಳು ಇನ್ನಷ್ಟು ಸಾಧನೆ ಮಾಡಿ ಗದಗ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೀರ್ತಿ ತರಲಿ ಎಂದು ಹಾರೈಸಿದರು.
ವಿಬಿಐ ನ್ಯೂಸ್ನ ಸಂಪಾದಕರಾದ ವೆಂಕಟೇಶ ಇಮರಾಪೂರ ಮಾತನಾಡಿ, ವಿದುಷಿ ರಾಘವಿ ಜ್ಯೋತಿಶ್ರೀ ಅವರು ಹತ್ತು ವರ್ಷಗಳ ಹಿಂದೆ ಗದಗ ಜಿಲ್ಲೆಯಲ್ಲಿ ನಾಟ್ಯ ಅಕಾಡೆಮಿಯನ್ನು ಸ್ಥಾಪಿಸಲು ನಿರ್ಣಯ ಮಾಡಿ ಸಂಕಲ್ಪದಂತೆ ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಒಂದು ವಿಧ್ಯಾರ್ಥಿಯಿಂದ ಆರಂಭವಾದ ಈ ಸಂಸ್ಥೆ ಹಂತ ಹಂತವಾಗಿ ಶ್ರಮಪಟ್ಟು ಗದಗ ನಗರ ಸೇರಿದಂತೆ ಮುಂಡರಗಿ, ಅಣ್ಣಿಗೇರಿ, ಗಜೇಂದ್ರಗಡ ತಾಲ್ಲೂಕುಗಳಲ್ಲಿ 7 ಶಾಖೆಗಳನ್ನು ತೆರೆದು ಮಕ್ಕಳಿಗೆ ನೃತ್ಯವನ್ನು ಕಲಿಸುವ ಮೂಲಕ ಅವರಲ್ಲಿ ಹೊಸ ಬೆಳಕು ತುಂಬಿದ್ದಾರೆ.ಅವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸೃಷ್ಟಿ ವಿದ್ಯಾರ್ಥಿಯ ಪಾಲಕರು ಮಾತನಾಡಿ, ಹಿಂದಿನ ದಿನಗಳಲ್ಲಿ ನೃತ್ಯವನ್ನು ಇಷ್ಟೊಂದು ಸರಳವಾಗಿ ಕಲಿಯಲು ಸಾದ್ಯವಾಗಿರಲಿಲ್ಲ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಎಲ್ಲ ಮಕ್ಕಳು ತಮ್ಮ ಮಕ್ಕಳೆಂದು ಬಾವಿಸಿ ನೃತ್ಯ ಕಲಿಸುತ್ತಿದ್ದಾರೆ ಎಂದು ಹೇಳಿದರು.
ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ ನಿರ್ದೇಶಕಿ, ವಿದುಷಿ ರಾಘವಿ ಜ್ಯೋತಿಶ್ರೀ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ನಾಗರತ್ನಾ ಕುಂಬಾರ ಅವರು ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 