ಬೆಳಗಾವಿ: ಕಣ್ಮನ ಸೆಳೆದ ಮಕ್ಕಳ ವಿಜ್ಞಾನ ಹಬ್ಬ

ಲೋಕದರ್ಶನ ವರದಿ

ಬೆಳಗಾವಿ 12:  ಶಾಲಾ ಮಕ್ಕಳನ್ನು ಕಾರ್ಯಕ್ರಮಗಳಲ್ಲಿ ನೋಡುವುದೆಂದರೆ ಎಲ್ಲಿಲ್ಲದ ಖುಷಿ ನೀಡುತ್ತದೆ. ಇಂತಹ ಸಂಭ್ರಮಕ್ಕೆ ಬುಧವಾರ ನಗರದ ವಡಗಾವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಯಿತು. ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

3 ಶಾಲೆಗಳ ಸುಮಾರು 150 ಕ್ಕೂ ಅಧಿಕ ವಿದ್ಯಾಥರ್ಿಗಳು ವಿವಿಧ ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಬರುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. 

ವಡಗಾವಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೀಮಾ ರಾಯ್ಕರ್ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮತ್ತು ಅನ್ವೇಷಣೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಬೇಕು ಎಂಬ ಕಾರಣಕ್ಕೆ ಪ್ರಸಕ್ತ ವರ್ಷದಿಂದ ಸರಕಾರ ಈ ಕಾರ್ಯಕ್ರಮ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಕ್ಲುಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಪ್ರಶ್ನೆ ಮಾಡುವ ಪೃವೃತ್ತಿ,  ವಿಜ್ಞಾನ ಆಸಕ್ತಿ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು. 

ಉದ್ಯಮಿ ವಿಠ್ಠಲ್ ರಾವಳ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರ ಸಂಘದ ನಗರ ಘಟಕದ ಅಧ್ಯಕ್ಷ ನಂದೀಶ್ ಕಾಕತಿಕರ್, ಮುಖ್ಯಾಧ್ಯಾಪಕರಾದ ವಿ.ಟಿ. ಅಪ್ಪಾಜಿ, ಎ.ಟಿ. ಕೋಲಕಾರ ಇದ್ದರು.