ಸಡಗರದಿಂದ ಮಕ್ಕಳ ದಿನಾಚರಣೆ

ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ವತಿಯಿಂದ ದಿ. 14ರಂದು ಪಂಡಿತ ಜವಾಹರಲಾಲ್ ನೆಹರುರವರ ಜನ್ಮ ದಿನಾಚರಣೆ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಜಿಲ್ಲಾ ವಿಭಾಗೀಯ ಮಟ್ಟದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ.ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿಗಳು ಮಾತನಾಡಿ ಪಂಡಿತ ನೆಹರುರವರು, ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದರಿಂದ ತಮ್ಮ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲು ಕರೆ ನೀಡಿದರು. ಇಂದು ಮಕ್ಕಳು ವಿಶೇಷವಾದ ಪ್ರತಿಭೆಯ ಮೂಲಕ ಹಲವಾರು ನೃತ್ಯ, ವೇಷಭೂಷಣ, ಏಕಪಾತ್ರಾಭಿನಯ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದು ಸಂತೋಷದಾಯಕ ಎಂದು ತಿಳಿಸಿದರು.

ಡಾ. ಆನಂದ ಕೆ. ಮುಖ್ಯ  ಕಾರ್ಯನಿವರ್ಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವ ಹಾಗೆ ಮಕ್ಕಳಿಗೆ ಶಾಲಾ ಅಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಬೇಕು ಪಾಲಕರು ಮಕ್ಕಳ ಮೇಲೆ ಅತೀಯಾದ ಒತ್ತಡ ಹೇರಬಾರದು ಎಂದು ಪಾಲಕರುಗೆ ಕಿವಿಮಾತು ಹೇಳಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಶಾಲಾ ಪೂರ್ವ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ ಮೂಲಕ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ ಬೆಳೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್.ಜಿ.ಸಲಗರೆ ಸದಸ್ಯ ಕಾರ್ಯದಶರ್ಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರು ಮಾತನಾಡಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆಯನ್ನು ಕೊಡಬೇಕು ಹಾಗೂ ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜಿಸಿ ಅವರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು. 

ಜಿಲ್ಲೆಯ 5 ತಾಲೂಕಿನಿ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕ್ರೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದಿನೇಶ ಆರ್.ಜಿ. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಜಿಲ್ಲಾ ಕಚೇರಿ ಸಿಬ್ಬಂದಿವರ್ಗ, ಮೇಲ್ವೀಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಭಾಗವಹಿಸಿದ್ದರು.

ಅಕ್ಕಮಹಾದೇವಿ ಕೆ.ಎಚ್. ಉಪರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಆಡಿದರು. ರವಿ ಉಮಚಗಿ, ಜಿಲ್ಲಾ ಸಂಯೊಜಕರು ಬಾಲ ಭವನ, ಇವರು ವಂದನಾರ್ಪಣೆಯನ್ನು ನಡೆಸಿದರು.