ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ - ನ್ಯಾಯಾಧೀಶ ಅಶೋಕ್

ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ - ನ್ಯಾಯಾಧೀಶ ಅಶೋಕ್ Child protection is everyone's responsibility - Judge Ashok

            ಸಿರುಗುಪ್ಪ 17:ಭಾರತ ದೇಶದಲ್ಲಿ ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆತರಲಾಗಿದೆ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆಎಂದು ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಆರ್ ಹೆಚ್‌ಅಶೋಕ್ ಹೇಳಿದರು   ಸಿರುಗುಪ್ಪ ನಗರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆ 137ನೇ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡುತ್ತಾ ಮಕ್ಕಳ ಬಾಲ್ಯವು ಅತ್ಯುತ್ತಮ ವಾದದ್ದು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಪ್ರತಿಯೊಬ್ಬ ತಂದೆ ತಾಯಿ ಕೊಡಿಸಬೇಕು ಇದರಿಂದ ಮಕ್ಕಳು ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಾಣವಾಗಿಸಲು ಸಾಧ್ಯಎಂದುಕರೆ ನೀಡಿದರು.

          ವಕೀಲರ ಸಂಘದ ತಾಲೂಕ ಅಧ್ಯಕ್ಷಯು. ವೆಂಕೋಬ ಅವರು ಮಾತನಾಡಿ ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರುಅವರು ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಅವರ ಅವಧಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಶಾಲೆಗಳನ್ನು ಆರಂಭಿಸಿದ್ದರು. ಮಕ್ಕಳನ್ನು ಪೋಷಕಾಂಶ ಹೆಚ್ಚಿಸಲು ಉಚಿತ ಹಾಲು ನೀಡುವ ವಿವಿಧ ಯೋಜನೆಗಳನ್ನು ಜಾರಿಗೆತಂದರುಎಂದರು ಪ್ರಾಂಶುಪಾಲ ಸಿ.ಎನ್‌. ಶಿವಯೋಗಿ ಸಹಾಯಕ ಸರ್ಕಾರಿಅಭಿಯೋಜಕ ಶಿವರಾಜ್ ವಕೀಲರ ಸಂಘದ ಉಪಾಧ್ಯಕ್ಷ ಎಂ ಶರೀಫ್ ಸಾಬ್ ಕಾರ್ಯದರ್ಶಿ ಎಂ ಶಿವಕುಮಾರ್ ವಕೀಲರು ಮಂಜುಳಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್‌ಗುರ​‍್ಪ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್ ಸಾಕ್ಷರತಾ ಅಬ್ದುಲ್ ನಬಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ವೈ.ಎಸ್‌. ಹನುಮಂತಪ್ಪ ಮಹಿಳಾ ಮತ್ತು ಮಕ್ಕಳ ಅಭಿವೃದಿ ್ಧಯೋಜನಾ ಅಧಿಕಾರಿ ಪ್ರದೀಪ್ ಕುಮಾರ್ ಶಿಕ್ಷಕರು ರಮೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.