ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ನಿರ್ಮೂಲನೆಗೆ ಕೈಜೋಡಿಸಿ: ಶಿವಾನಂದ

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ನಿರ್ಮೂಲನೆಗೆ ಕೈಜೋಡಿಸಿ: ಶಿವಾನಂದ Child marriage is a punishable crime: Join hands for its eradication: Shivanand

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ನಿರ್ಮೂಲನೆಗೆ ಕೈಜೋಡಿಸಿ: ಶಿವಾನಂದ 

ಕೊಪ್ಪಳ 31 : ಬಾಲ್ಯವಿವಾಹವು ಒಂದು ಶಿಕ್ಷಾರ್ಹ ಅಪರಾಧವಾಗಿದ್ದು, ಇದರ ನಿರ್ಮೂಲನೆಗೆ ಮತ್ತು ಕೊಪ್ಪಳವನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೈಜೋಡಿಸಬೇಕು ಎಂದು ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಹೇಳಿದರು. 

ಅವರು ಬುಧವಾರ ಯಲಬುರ್ಗಾ ಸರಕಾರಿ ಬಾಲಕಿಯ ಪದವಿಪೂರ್ವಕಾಲೇಜಿನ ಸಭಾಭವನದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಯಲಬುರ್ಗಾತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸರಕಾರಿ ಬಾಲಕಿಯ ಪದವಿಪೂರ್ವಕಾಲೇಜು ಸಂಯುಕ್ತಾಶ್ರಯದಲ್ಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ” ಹಾಗೂ “ಹದಿ-ಹರೆಯದವರಆರೋಗ್ಯರಕ್ಷಣೆ” ಕುರಿತಾದಜಾಗೃತಿಕಾರ್ಯಕ್ರಮದಲ್ಲಿ ಮಾತನಾಡಿದರು.  

ಬಾಲ್ಯವಿವಾಹಕ್ಕೆ ಕಾರಣಗಳೆಂದರೆ ಮೂಡನಂಬಿಕೆ, ಅನಕ್ಷರತೆ, ಬಡತನ, ಬಾಲ್ಯವಿವಾಹದದುಷ್ಪರಿಣಾದ ಬಗ್ಗೆ ಅರಿವುಇಲ್ಲದೇಇರುವುದು, ರಕ್ತ ಸಂಬಂಧವನ್ನು ಉಳಿಸಿಕೊಳ್ಳುವುದು, ಕುಟುಂಬ ಆಸ್ತಿಯನ್ನು ಉಳಿಸಿಕೊಳ್ಳುವುದು, ಪಾಲಕರು ಮದುವೆ ಮಾಡಿತಮ್ಮಜವಾಬ್ದಾರಿಯನ್ನು ಕಳೆದುಕೊಳ್ಳುವುದು, ಸಾಮೂಹಿಕ ವಿವಾಹದಲ್ಲಿಕಡಿಮೆಖರ್ಚುಆಗುತ್ತದೆ ಎಂಬ ಬಾವನೆ, ವೃದ್ಧರು ಹಾಗೂ ಅನಾರೋಗ್ಯದ ಹಿರಿಯರ ಆಸೆ ಈಡೆರಿಸುವಉದ್ದೇಶದಿಂದ ಬಾಲ್ಯವಿವಾಹ ಮಾಡುತ್ತಾರೆ. ಬಾಲ್ಯವಿವಾಹ ಮಾಡುವುದರಿಂದ ಹೆಣ್ಣುಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರುತ್ತದೆಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಯಲಬುರ್ಗಾ ಸರಕಾರಿ ಬಾಲಕಿಯ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದಎಸ್‌.ಎಸ್ ಹಿರೇಮಠಅವರು ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವುದು ಪ್ರತಿಯೋಬ್ಬ ಪ್ರಜೇಯಜವಾಬ್ದಾರಿಯಾಗಿದೆ. ಇಲಾಖೆಗಳು ಜಾಗೃತಿ ಮೂಡಿಸಿದರೆ ಸಾಲದು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಬಾಲ್ಯವಿವಾಹ ನಿಷೇಧಕ್ಕೆಕೈಜೊಡಿಸಬೇಕು. ಆರೋಗ್ಯಇಲಾಖೆಯಜಾಗೃತಿ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತವಾಗಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.  

ವಿದ್ಯಾರ್ಥಿಗಳು ಕಾರ್ಯಕ್ರಮಕುರಿತುತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿಕಾಲೇಜಿನಅಥಿತಿ ಸಹ ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.