ಮುಲ್ಲಾ ಪ್ಲಾಟ್ ಅಭಿವೃದ್ಧಿಗೆ 4.30 ಕೋಟಿ ಅನುದಾನ: ಪ್ರಕಾಶ ಹುಕ್ಕೇರಿ
Chikkodi: Rs 4.30 crore grant for development of Mulla Plot: Prakash Hukkeri
ಚಿಕ್ಕೋಡಿ: ಮುಲ್ಲಾ ಪ್ಲಾಟ್ ಅಭಿವೃದ್ಧಿಗೆ 4.30 ಕೋಟಿ ಅನುದಾನ: ಪ್ರಕಾಶ ಹುಕ್ಕೇರಿ
ಚಿಕ್ಕೋಡಿ, 15 : ಪಟ್ಟಣದ ಮುಲ್ಲಾ ಪ್ಲಾಟ್ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ವಿವಿಧ ಮೂಲಭೂತ ಸೌಕರ್ಯ ಕಾಮಗಾರಿಗಳಿಗಾಗಿ 4.30 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.ಮುಲ್ಲಾ ಪ್ಲಾಟ್ ಪ್ರದೇಶದ ಸಾರ್ವಜನಿಕರಿಗೆ ಅಭಿವೃದ್ಧಿ ಕಾಮಗಾರಿಗಳ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, “ಮುಲ್ಲಾ ಪ್ಲಾಟ್ ಅಭಿವೃದ್ಧಿ ಮಾಡಲು ಹಲವು ವರ್ಷಗಳಿಂದ ಪ್ರಯತ್ನಿಸಿದ್ದರೂ, ಎರಡು ಸಮಾಜಗಳ ನಡುವಿನ ವಿವಾದ ಹೈಕೋರ್ಟ್‌ನಲ್ಲಿ ಇರುವುದರಿಂದ ಕೆಲಸ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. ಈಗ ವ್ಯಾಜ್ಯ ಅಂತ್ಯಗೊಂಡಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ, ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದ ಮೇರೆಗೆ 50 ಕೋಟಿ ರೂ ಅನುದಾನ ನೀಡಿದ್ದು, ಅದರಲ್ಲಿಂದ ಚಿಕ್ಕೋಡಿ ಪಟ್ಟಣಕ್ಕೆ 7 ಕೋಟಿ ರೂ ಬಿದ್ದಿದೆ. ಇದರಲ್ಲಿ ಮುಲ್ಲಾ ಪ್ಲಾಟ್ ಅಭಿವೃದ್ಧಿಗೆ ಮಾತ್ರ 4.30 ಕೋಟಿ ರೂ ಮೀಸಲಿಡಲಾಗಿದೆ. ಮುಲ್ಲಾ ಪ್ಲಾಟ್ ವ್ಯಾಪ್ತಿಯ ಸುಮಾರು 500 ಮನೆಗಳಿಗೆ ವಿದ್ಯುತ್ ಪೂರೈಕೆ ಸುಧಾರಣೆ. ಭೂಗತ ಕೇಬಲ್ ಅಳವಡಿಕೆ. ಒಳಚರಂಡಿ ನಿರ್ಮಾಣ. ಗಟಾರು ವ್ಯವಸ್ಥೆ ಸುಧಾರಣೆ. ರಸ್ತೆ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳು ನಡೆಯಲಿವೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಇರ್ಫಾನ ಬೇಪ್ಪಾರಿ, ಪುರಸಭೆ ಸದಸ್ಯರು ರಾಮಾ ಮಾನೆ, ಗುಲಾಬ ಬಾಗವಾನ, ಶ್ರೀಮಂತ ಮಾಳಗೆ, ವಿನೋದ ಮಾಳಗೆ ಹಾಗೂ ಮುಖಂಡರು ಮಜೀದ ಬೇಪ್ಪಾರಿ, ಮುದ್ದಸರ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.ಬಾಕ್ಸ್ ..ಕಸ ವಿಲೇವಾರಿಯಲ್ಲಿ ವಿಫಲವಾದ ಪುರಸಭೆ ವಿರುದ್ಧ ಪ್ರಕಾಶ ಹುಕ್ಕೇರಿಯ ತೀವ್ರ ಆಕ್ರೋಶ
ಚಿಕ್ಕೋಡಿ: ಪಟ್ಟಣದಲ್ಲಿ ಕಸ ವಿಲೇವಾರಿ ಕಾರ್ಯ ಸರಿಯಾಗಿ ನಡೆಯದೇ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಪುರಸಭೆ ವಿರುದ್ಧ ಹರಿಹಾಯ್ದರು. ನಗರದಲ್ಲಿ ಸೂಕ್ತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ವಿಫಲರಾಗಿರುವುದನ್ನು ಪ್ರಶ್ನಿಸಿದ ಅವರು, “ಕಸವನ್ನು ಎತ್ತುವುದಿಲ್ಲವೆಂದರೆ ಜನರು ತಮ್ಮ ಪ್ರದೇಶದ ಕಸವನ್ನು ಕೂಡಿಸಿ ಪುರಸಭೆಯ ಮುಖ್ಯಾಧಿಕಾರಿಗಳ ಮನೆ ಮುಂದೆ ಚೆಲ್ಲಿಬರಬೇಕು” ಎಂದು ಸಾರ್ವಜನಿಕರಿಗೆ ಸೂಚಿಸಿದರು. ನಗರದ ಸ್ವಚ್ಛತೆಗೆ ಅಧಿಕಾರಿಗಳು ಜವಾಬ್ದಾರಿತನದಿಂದ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು. ಜೊತೆಗೆ ಜನರಿಂದ ಬಂದಿರುವ ದೂರುಗಳ ಹಿನ್ನೆಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಸೂಚಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 