ಲೋಕದರ್ಶನವರದಿ
ಬ್ಯಾಡಗಿ18: ಗ್ರಾಹಕರ ಹಿತ ದೃಷ್ಠಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳೀಯ ಶಾಖಾ ಕಚೇರಿಯನ್ನು ಈಗಿರುವ ಕಟ್ಟಡದಿಂದ ಬೇರೆಡೆ ವಿಶಾಲವಾದ ಜಾಗವಿರುವ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ರಾಜ್ಯ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ (ನ್ಯಾಸ) ಮುಖ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಕುರಿತು ಬ್ಯಾಂಕಿನ ಬೆಂಗಳೂರು ಮತ್ತು ದಾವಣಗೆರೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಹಾವೇರಿಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿರುವ ಅವರು ಸದ್ಯ ಮುಖ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಕಾರಣ ಹಿಂದೆ ಎರಡು ಶಾಖೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಬಿ.ಎಂ. ಹಾಗೂ ಎಸ್.ಬಿ.ಐ. ವಿಲೀನವಾದ ನಂತರ ಗ್ರಾಹಕರ ಸಂಖ್ಯೆಯು ಹೆಚ್ಚಾಗಿ ಸಮರ್ಪಕವಾಗಿ ಸೇವೆ ದೊರಕುವುದು ದುಸ್ತರವಾಗಿದೆ. ಅದರಲ್ಲೂ ಮುಖ್ಯ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಬ್ಯಾಂಕಿಗೆ ಬರುವ ಗ್ರಾಹಕರು ಪರದಾಡುವಂತಾಗಿದೆ. ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ಕೂಡ ಬಹಳಷ್ಟು ಅವ್ಯವಸ್ಥೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಗ್ರಾಹಕರಿಗೆ ಭಾಷೆಯ ಗೊಂದಲ...!!!
ಮುಖ್ಯವಾಗಿ ಬ್ಯಾಂಕಿಗೆ ಬರುವ ಗ್ರಾಹಕರಿಗೆ ಪ್ರಮುಖ ಸಮಸ್ಯೆಯೊಂದು ತೀವ್ರವಾಗಿ ಕಾಡುತ್ತಿದೆ. ಅದುವೇ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುವ ನೌಕರರ ಭಾಷೆಯ ಗೊಂದಲದಿಂದ ಗ್ರಾಹಕರು ಪರದಾಡುತ್ತಿರುವಂತಾಗಿದ್ದು, ಈ ಬಗ್ಗೆ ಗಮನ ಹರಿಸಿ ಕನ್ನಡ ಭಾಷಾ ಜ್ಞಾನವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬ್ಯಾಂಕಿಗೆ ವಗರ್ಾಯಿಸಬೇಕು ಎಂದು ಅವರು ಮನವಿ ಪತ್ರದ ಮೂಲಕ ಹಿರಿಯ ಅಧಿಕಾರಿಗಳನ್ನು ಆಗ್ರಹ ಪಡಿಸಿದ್ದಾರೆ.