ಚಿಗುರು ಮಕ್ಕಳ ಕಾರ್ನಿವಲ್ 2025ಹಿ26: ಮಕ್ಕಳ ಪ್ರತಿಭೆಯ ಮಹೋತ್ಸವ
Chiguru Children's Carnival 2025H26: A celebration of children's talents
ಚಿಗುರು ಮಕ್ಕಳ ಕಾರ್ನಿವಲ್ 2025ಹಿ26: ಮಕ್ಕಳ ಪ್ರತಿಭೆಯ ಮಹೋತ್ಸವ
ಹುಬ್ಬಳ್ಳಿ 04: ಯೂತ್ ಫಾರ್ ಸೇವಾ ಸಂಸ್ಥೆಯ ಎಂಟನೇ ವರ್ಷದ “ಚಿಗುರು” ಮಕ್ಕಳ ಕಾರ್ನಿವಲ್ 2025ಹಿ26 ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕೆಎಲ್‌ಇ ಸಂಸ್ಥೆಯ ಎಂ.ಆರ್. ಸಾಖರೆ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆದ ಚಿಗುರು ಕಾರ್ಯಕ್ರಮದಲ್ಲಿ ಸರ್ಕಾರಿ ಹಾಗೂ ಅನುದಾನಿತ ಒಟ್ಟು 45 ಶಾಲೆಗಳ ಸುಮಾರು 1,500 ಮಕ್ಕಳು ಭಾಗವಹಿಸಿದ್ದರು.
ಮೆಂಟಲ್ ಮ್ಯಾಥ್ಸ್, ನಾಟಕ, ರಂಗೋಲಿ, ಚೀಲ ಓಟ, ನೃತ್ಯ, ಗಾಳಿಪಟ ತಯಾರಿಕೆ, ಯೋಗ, ಕಂಪ್ಯೂಟರ್ ಪರಿಚಯ ಸೇರಿದಂತೆ 21 ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಮುಖ್ಯ ಅತಿಥಿಗಳಾಗಿ ಏಒಅಖಋ ನಿರ್ದೇಶಕ ಡಾ. ಈಶ್ವರ್ ಆರ್. ಹೊಸಮನಿ, ಯುನೈಟೆಡ್ ಸಿಕ್ಯುರಿಟಿ ಫೋರ್ಸ್ ಮಾಲೀಕ ಸಂತೋಷ್ ಇಂಚಲ್, ವೀಟೆಕ್ ವಾಲ್ಟ್ಸನ ವ್ಯವಸ್ಥಾಪಕ ನಿರ್ದೇಶಕ ಗೀರೀಶ್ ಮಣೆ ಭಾಗವಹಿಸಿದ್ದರು. ಅವರು ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂತ್ ಫಾರ್ ಸೇವಾ ಸ್ಟೀರಿಂಗ್ ಸಮಿತಿ ಸದಸ್ಯ ಡಾ. ಸುನಿಲ್ ಗೋಖಲೆ ವಹಿಸಿದ್ದರು.
ಯೂತ್ ಫಾರ್ ಸೇವಾದ ಸಲಹಾ ಸಮಿತಿ ಸದಸ್ಯರಾದ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದೇಹಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ಎಫ್. ಕಮ್ಮಾರ್, ಚಾಟೆಡ್ ಅಕೌಂಟೆಡ್ ಸಂತೋಷ್ ಪಾಟೀಲ್, ಕೆಎಲ್‌ಇ ಸಂಸ್ಥೆಯ ಸ್ಟುಡೆಂಟ್ ವೆಲ್‌ಫೇರ್‌ನ ಮುಖ್ಯಸ್ಥ ಸಂಜಯ ಕೋಟಬಾಗಿ, ವಿ-ಟೆಕ್ ಹೈಡ್ರಾಲಿಕ್ಸ್‌ನ ಸಿಇಒ ವಿಠಲ್ ಖಟಾವ್ಕರ್, ಸ್ಮಿತಾ ಪಾಯಲ್ ಯಾವಗಲ್, ಸುರೇಶ್ ಸರ್ದೇಶಪಾಂಡೆ, ಡಾ. ಪ್ರಕಾಶ್ ರಾಥೋಡ್ ಹಾಗೂ ಮಾಧುರಿ ಖಟಾವ್ಕರ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ನರಮನೋವೈದ್ಯ ಸಲಹೆಗಾರ ಡಾ. ಮಹೇಶ್ ದೇಸಾಯಿ, ಏಐಇ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಪಾಟೀಲ್, ಶಿಕ್ಷಣ ಮಂಡಳಿಯ ಡಿಡಿಪಿಸಿ ಎಸ್.ಎಂ. ಹುಡೆದಮನಿ ಹಾಗೂ ಸನಾ ಮಹಾವಿದ್ಯಾಲಯದ ವ್ಯವಸ್ಥಾಪಕ ಸದಸ್ಯ ಅಶ್ರಫ್ ಅಲಿ ಬಶೀರ್ ಅಹ್ಮದ್ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ನಗರದ ವಿವಿಧ ಕಾಲೇಜುಗಳಿಂದ ಬಂದಿದ್ದ 480 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.
ಕಾರ್ೊರೇಟ್ ಕಂಪನಿಗಳಿಂದ ಬಂದಿದ್ದ 30 ಜನ ಉದ್ಯೋಗಿಗಳು ಸೇವೆ ಸಲ್ಲಿಸಿದ್ದಾರೆ. ವಿವಿಧ ಶಾಲೆಗಳಿಂದ ಬಂದಿದ್ದ 100 ಮಂದಿ ಶಿಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. 21 ಸ್ಪರ್ಧೆಗಳಿಗೆ 44 ಮಂದಿ ತೀರ್ುಗಾರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 