ಬೆಂಗಳೂರು,ಡಿ 25 ಮುಖ್ಯಮಂತ್ರಿ ಚಂದ್ರು ಯಾರಿಗೆ
ಗೊತ್ತಿಲ್ಲ? ’ಕನ್ನಡದ ಹಿರಿತೆರೆ, ಕಿರುತೆರೆ ಹಾಗೂ
ರಂಗಭೂಮಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಸಕ್ರಿಯರಾಗಿದ್ದಾರೆ ಕಲಾ ಗಂಗೋತ್ರಿ ರಂಗ ತಂಡ ಸ್ಥಾಪಿಸಿ ತನ್ಮೂಲಕ ಹಲವು ನಾಟಕಗಳನ್ನು
ಪ್ರದರ್ಶಿಸಲಾಗಿದ್ದು, ‘ಮುಖ್ಯಮಂತ್ರಿ’ ನಾಟಕ 700 ಪ್ರದರ್ಶನ ಕಂಡು ದಾಖಲೆ ನಿರ್ಮಿಸುವತ್ತ ದಾಪುಗಾಲು
ಹಾಕಿದೆ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ
ಮುಖ್ಯಮಂತ್ರಿ ಚಂದ್ರು, “ಕಲಾ ಗಂಗೋತ್ರಿ ರಂಗ ತಂಡ ಸ್ಥಾಪನೆಗೆ 49 ವರ್ಷಗಳಾಗಿದ್ದು, ಈ ಸಂಭ್ರಮಾಚರಣೆ
ಸಲುವಾಗಿ ಇದೇ 31ರಿಂದ ಜನವರಿ 5 ರ ವರೆಗೆ 6 ದಿನಗಳ ಕಾಲ ‘ಅಮೃತ ರಂಗ ಹಬ್ಬ’ ಆಯೋಜಿಸಲಾಗಿದೆ ಎಂದರು ‘ಮುಖ್ಯಮಂತ್ರಿ’ ನಾಟಕ ಜನವರಿ 4ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ
ಪ್ರದರ್ಶನಗೊಳ್ಳಲಿದೆ “ಜನವರಿ 4ರಂದು 700ನೇ ಪ್ರದರ್ಶನ ಕಾಣಲಿರುವ ಈ ನಾಟಕವನ್ನು ಗಿನ್ನೆಸ್ ದಾಖಲೆಗೆ
ಸೇರಿಸುವ ಪ್ರಯತ್ನ ನಡೆದಿದೆ ಎಲ್ಲ ಪ್ರದರ್ಶನಗಳಲ್ಲೂ
ನಾನೇ ಮುಖ್ಯಮಂತ್ರಿಯಾಗಿ ಅಭಿನಯಿಸಿರುವುದು, 250 ಉಚಿತ ಪ್ರದರ್ಶನಗಳು ಸೇರಿದಂತೆ ಹಲವು ವಿಶೇಷತೆಗಳು
ಈ ದಾಖಲೆಗೆ ಕಾರಣವಾಗಲಿದೆ” ಎಂದರು. ಅಮೃತ ರಂಗ ಹಬ್ಬದಲ್ಲಿ
ಆರಂಭದಿಂದಲೂ ಕಲಾ ಗಂಗೋತ್ರಿಯ ಭಾಗವಾಗಿರುವ ಹಿರಿಯ ಕಲಾವಿದ ಕೆ ಆರ್ ಶ್ರೀನಿವಾಸ್ ಮೇಷ್ಟ್ರು ಅವರಿಗೆ
75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ
ಜನವರಿ 3ರಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರು ಮಲ್ಲಿಗೆ ನಾಟಕ ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಾಹಿತಿ ಡಾ ಎಚ್ ಎಸ್ ವೆಂಕಟೇಶಮೂರ್ತಿಯವರಿಗೆ
75 ವರ್ಷ ತುಂಬಿದ ಸಂದರ್ಭದಲ್ಲಿ ಎನ್ ಆರ್ ಕಾಲೋನಿಯ ಸಿ. ಅಶ್ವತ್ಥ್ ಕಲಾ ಭವನದಲ್ಲಿ ಬೆಳಗ್ಗೆ
11ರಿಂದ ಸನ್ಮಾನ ಹಾಗೂ ‘ಮುದಿ ದೊರೆ ಮತ್ತು ಮೂವರು
ಮಕ್ಕಳು’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.