ಬೆಂಗಳೂರು, ಮೇ 7, ಬುದ್ಧ ಪೂರ್ಣಿಮೆಯ ನಿಮಿತ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಮಸ್ತ ನಾಡಿನ ಜನತೆಗೆ ಶುಭಕೋರಿದ್ದಾರೆ.
ಶಾಂತಿ, ಕರುಣದ ಹಾಗೂ ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧರ ಜನನ, ಜ್ಞಾನೋದಯ ಮತ್ತು ಮೋಕ್ಷದ ಸಂಗಮವಾದ ಬುದ್ಧ ಪೂರ್ಣಿಮೆಯಂದು ಮಹಾನ್ ವಿರಾಗಿಗೆ ನಮಿಸೋಣ ಎಂದು ಮುಖ್ಯಮಂತ್ರಿಗಳು ಶುಭಕೋರಿದ್ದಾರೆ.ಇನ್ನು, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಆಸೆಯೇ ದುಃಖಕ್ಕೆ ಮೂಲ, ಕೋಪವೆಂಬುದು ಸುಡುವ ಕೆಂಡ ಎಂದು ಹೇಳಿದ ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧರ ಜನನ, ಜ್ಞಾನೋದಯ, ಮರಣಗಳ ಮಹಾ ಸಂಗಮವಾದ ಇಂದು ಬುದ್ಧ ಪೂರ್ಣಿಮೆ ಎಲ್ಲರಿಗೂ ಶುಭಾಶಯಗಳು.ಭಗವಾನ್ ಬುದ್ಧ ಬೋಧಿಸಿದ ಮಾನವೀಯ ಮೌಲ್ಯಗಳನ್ನು ಅನುಸರಿಸೋಣ ಎಂದು ಅವರು ಕರೆ ನೀಡಿದ್ದಾರೆ.