ಮುಖ್ಯಮಂತ್ರಿ ಭೇಟಿ ಹಿನ್ನೆಲೆ; ಟಿಡಿಪಿ ನಾಯಕರ ಗೃಹಬಂಧನ

ಚಿತ್ತೂರು, ಜ 9 ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಭೇಟಿ ನೀಡಲಿದ್ದಾರೆ ಎಂಬ ಕಾರಣ ಸಂಬಂಧಿಸಿದ ಸಂಸದೀಯ ಕ್ಷೇತ್ರದ ಟಿಡಿಪಿ ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ. ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ  ತೊಂದರೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. ರೆಡ್ಡಿ ಇಂದು ಪಿವಿಕೆಎನ್ ಮೈದಾನದಲ್ಲಿ 'ಅಮ್ಮಾವಾಡಿ ' ಯೋಜನೆಗೆ ಚಾಲನೆ ನೀಡಲಿದ್ದಾರೆ. ಟಿಡಿಪಿ ನಾಯಕರಾದ ಶಾಸಕ ಎ.ಎಸ್.ಮನೋಹರ್, ವಿಧಾನಪರಿಷತ್ ಸದಸ್ಯಯ ದೋರಬಾಬು, ಟಿಡಿಪಿ ಜಿಲ್ಲಾಧ್ಯಕ್ಷ ಪುಲಿವಾರ್ತಿ ನಾನಿ ಮತ್ತಿತರರನ್ನು ಬಂಧಿಸಲಾಗಿದೆ. ಟಿಡಿಪಿ ರಾಷ್ಟ್ರೀಯ ನಾಯಕ ಚಂದ್ರಬಾಬು ನಾಯ್ಡು ಅವರ ಬಂಧನ ವಿರೋಧಿಸಿ ವಿಜಯವಾಡದಲ್ಲಿ ಟಿಡಿಪಿ ನಾಯಕರು ಪ್ರತಿಭಟನೆ ಹಮ್ಮಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರು.