ಚಿಯಾ ಸೂಪರ್ ಫುಡ್‌-ಪರ್ಯಾಯ ಬೆಳೆ

 ಚಿಯಾ ಸೂಪರ್ ಫುಡ್‌-ಪರ್ಯಾಯ ಬೆಳೆ Chia superfood-alternative crop

ಲೋಕದರ್ಶನ ವರದಿ 

ಚಿಯಾ ಸೂಪರ್ ಫುಡ್‌-ಪರ್ಯಾಯ ಬೆಳೆ 

ನೇಸರಗಿ 08: ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನಕೇಂದ್ರ, ಮತ್ತಿಕೊಪ್ಪದಲ್ಲಿಚಿಯಾ ಬೆಳೆಯ ಬೇಸಾಯ ತಂತ್ರಜ್ಞಾನಗಳ ಒಂದು ದಿನದತರಬೇತಿಕಾರ್ಯಕ್ರಮವನ್ನು ದಿನಾಂಕ 08.10.2025 ರಂದುಏರಿ​‍್ಡಸಲಾಗಿತ್ತು.   

ಕಾರ್ಯಕ್ರಮದಉದ್ಘಾಟನೆಯನ್ನುಚಚಡಿಗ್ರಾಮದ ಪ್ರಗತಿಪರರೈತರಾದ ನಾಗರಾಜದೇಸಾಯಿ ನೆರೆವೇರಿಸಿದರು. ಕೇಂದ್ರದ ಮುಖ್ಯಸ್ಥಡಾ. ಮಂಜುನಾಥಚೌರಡ್ಡಿಇವರುಇವರುಚಿಯಾಒಂದು ಸೂಪರ್ ಫುಡ್ ಬೆಳೆಯಾಗಿದ್ದು, ವಾತಾವರಣ ವೈಪರೀತ್ಯಗೆಒಂದು ಪರ್ಯಾಯ ಬೆಳೆಯಾಗಿ ಬೆಳೆಯಬಹುದು ಹಾಗೂ ನೂತನ ಮತ್ತುಓಷಧೀಯ ಗುಣಗಳನ್ನು ಹೊಂದಿದ ಬೆಳೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ​‍್ರ​‍್ರಥಮವಾಗಿ ಬೆಳೆಸಲು, ಹಿಂಗಾರು ಹಂಗಾಮಿನಲ್ಲಿಅಂತರ್ ಬೆಳೆಯಾಗಿ ಬೆಳೆಯಲು ಸಲಹೆ ನೀಡಿದರು.  

ಕಾರ್ಯಕ್ರಮದ ಪರಿಚಯದಲ್ಲಿ ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ಡಾ. ಎಸ್‌. ಎಸ್‌. ಹಿರೇಮಠಕಾರ್ಯಕ್ರದಲ್ಲಿ ಪಾಲ್ಗೊಂಡಎಲ್ಲಗಣ್ಯರನ್ನು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ನುಡಿಯಲ್ಲಿಚಿಯಾ ಬೆಳೆಯನ್ನು ಮೊದಲ ಬಾರಿಗೆಕರ್ನಾಟಕದಲ್ಲಿ ಸಿಫ್‌ಟಿಆರ್‌ಆಯ್, ಮೈಸೂರು ಸಂಸ್ಥೆಯಿಂದ 2014 ರಲ್ಲಿ ಈ ಬೆಳೆಯನ್ನು ಬೆಳೆಯಲು ಮೈಸೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆಸಲು ಪ್ರೋತ್ಸಾಹಿಸಿದ್ದರು.  ಈ ಬೆಳೆಯನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆಯುವ ತಂತ್ರಜ್ಞಾನಗಳನ್ನು ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ರೈತರಆದಾಯ ದ್ವಿಗುಣಗೊಳಿಸಲು ಚಿಯಾ ಬೆಳೆಯ ಒಂದು ದಿನದತರಬೇತಿಕಾರ್ಯಕ್ರಮವನ್ನು ಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿಚಿಯಾ ಬೆಳೆಯ ಬೇಸಾಯ ಕ್ರಮಗಳನ್ನು ಕುರಿತು ಸವಿಸ್ತಾರವಾಗಿ ತಿಳಿಸಿದರು.  ಜಿ. ಬಿ. ವಿಶ್ವನಾಥ ವಿಜ್ಞಾನಿ (ಬೇಸಾಯ ಶಾಸ್ತ್ರ) ಇವರುಚಿಯಾ ಬೆಳೆಯಲ್ಲಿ ಬಳಸಬಹುದಾದರಸಾವರಿ ಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಿದರು.   

ಕಾರ್ಯಕ್ರಮದಲ್ಲಿಗುಜರಾತನ ವೆನ್‌ಇನ್‌ಕಾರ​‍್ೋರೆಟೆಡ್ ಕಂಪನಿ ಲಿ. ವ್ಯವಸ್ಥಾಪಕ ನಿರ್ದೇಶಕ ಹಿತೇಶ ಫರೀಖ ಹಾಗೂ ಬೆಳಗಾವಿ ಉದ್ಯಮಿಗಳಾದ ಜೀತೇಂದ್ರ ಪುರೋಹಿತ, ಜೀತೆಂದ್ರಗೌರ್‌ಇವರುರೈತರೊಂದಿಗೆಚಿಯಾ ಬೆಳೆಯ ಗುಣಧರ್ಮ, ಶ್ರೇಣೀಕರಣ, ಮಾರುಕಟ್ಟೆ ಮತ್ತುರಫ್ತುಕುರಿತು ಸುದೀರ್ಘವಾಗಿ ಮುಖಾಮುಖಿ ಚರ್ಚೆ ನಡೆಸಿದರು. ಕಾರ್ಯಕ್ರಮದಲ್ಲಿಕೇಂದ್ರದ ವಿಜ್ಞಾನಿಗಳಾದ ಎಸ್‌. ಎಮ್‌. ವಾರದ, ಡಾ. ಭಾವಿನಿ ಪಾಟೀಲ ಹಾಗೂ ಡಾ. ಗುರುರಾಜಕೌಜಲಗಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಕೊನೆಯಲ್ಲಿಕೇಂದ್ರದ ವಿಜ್ಞಾನಿ ಜಿ. ಬಿ. ವಿಶ್ವನಾಥಇವರು ವಂದಿಸಿದರು.