ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ
Chhatrapati Shivaji Maharaj Jayanti programme
ತಾಳಿಕೋಟಿ 21: ಪ್ರಬುದ್ಧ ಆಡಳಿತಗಾರ ಎಂದೆನಿಸಿದ ಮರಾಠ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯನ್ನು ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂ ಎಸಿ ಹಾಗೂ ಇತಿಹಾಸ ವಿಭಾಗದ ಅಡಿಯಲ್ಲಿ ಅದ್ದೂರಿಯಾಗಿ ಗುರುವಾರ ಆಚರಿಸಲಾಯಿತು.
ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮಾನ್ಯ ಪ್ರಾಚಾರ್ಯರಾದ ಡಾ. ಆರ್ ಎಂ ಬಂಟನೂರ ಶಿವಾಜಿ ಮಹಾರಾಜರ ಜನ್ಮದಿನ ಪ್ರತಿ ವರ್ಷ ಫೆಬ್ರವರಿ 19 ರಂದು ಎಲ್ಲೆಡೆ ಆಚರಿಸಲಾಗುತ್ತಿದೆ. ಅವರ ತತ್ವ ಆದರ್ಶ ಅಳವಡಿಸಿಕೊಂಡು ಅವರ ಸ್ಮರಣೆಯಿಂದಲೇ ಧೈರ್ಯ ತುಂಬಿಕೊಳ್ಳುವ ಕೆಚ್ಚು ಬರುತ್ತದೆ. ಹಿಂದೂ ಧರ್ಮದ ಉಳಿಸಲು ಕಟ್ಟುನಿಟ್ಟಿನ ಕ್ರಮ ವಹಿಸಿ ಮಾತೃ ಪ್ರೇಮ, ಮಾತೃ ಭಾಷೆ ಬಗ್ಗೆ ವಿಶೇಷ ಗುಣವನ್ನು ಬೆಳೆಸಿಕೊಳ್ಳಲು ಶಿವಾಜಿ ಅವರೇ ಆದರ್ಶಪ್ರಾಯರು. ಇಂದಿನ ಯುವ ಪೀಳಿಗೆ ಶಿವಾಜಿ ಮಹಾರಾಜರ ಜೀವನ ಚರಿತ್ರೆ ತಿಳಿಯಬೇಕು ಎಂದು ಹೇಳಿದರು.ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಐ ಕ್ಯೂ ಎ ಸಿ ಸಂಯೋಜಕರಾದ ಉಮೇಶ ಮಂಗೊಂಡ ಮಾತನಾಡುತ್ತಾ 1630 ರಲ್ಲಿ ಜನಿಸಿದ ಶಿವಾಜಿ ಮಹಾರಾಜರು ಉತ್ತಮ ನಾಯಕತ್ವ ಆಡಳಿತ ತಂತ್ರ ಮೂಲಕ ಮರಾಠ ಸಾಮ್ರಾಜ್ಯ ಸ್ಥಾಪಿಸಿದ್ದರು. ಮರಾಠಿ ಹಾಗೂ ಸಂಸ್ಕೃತ ಭಾಷೆಗೆ ಹೆಚ್ಚು ಮಾನ್ಯತೆ ನೀಡಿ ನಮ್ಮ ಸಾಂಸ್ಕೃತಿಕ ರಾಷ್ಟ್ರೀಯತೆ ಬಗ್ಗೆ ಆದ್ಯತೆ ನೀಡಿದ ಬಗೆ ತಿಳಿಯುತ್ತದೆ. ದಾರ್ಶನಿಕ ಆಡಳಿತ ಶೈಲಿಯಲ್ಲಿ ಬ್ರಿಟಿಷರ ಪ್ರಭಾವದ ನಡುವೆ ಹಿಂದೂ ಪದ್ಧತಿ ರಕ್ಷಣೆ ಮಾಡಿದ್ದರು. ಸಣ್ಣ ಸೈನ್ಯದಲ್ಲೇ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಶಿವಾಜಿ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಮುನ್ನುಡಿ ಹಾಡಿದ್ದರು ಎಂದು ಇವರ ಆದರ್ಶವನ್ನು ಪಾಲಿಸಿ ನಮ್ಮ ಪರಂಪರೆ ಉಳಿಸೋಣ ಎಂದು ಕರೆ ನೀಡಿದರು.ಪ್ರಶಿಕ್ಷಣಾರ್ಥಿ ಅಕ್ಷತಾ ಬಡಿಗೇರ ಮತ್ತು ಸಂತೋಷ್ ಬಿರಾದಾರ ಪಿಪಿಟಿ ಮೂಲಕ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಪ್ರತಿ ಚಿತ್ರಗಳನ್ನು ಪ್ರದರ್ಶಿಸುತ್ತಾ ಅವರ ಚರಿತ್ರೆಯನ್ನು ಸವಿವರವಾಗಿ ವಿವರಿಸಿ ಹೇಳಿದರು. ಹಾಗೂ ಪ್ರಶಿಕ್ಷಣಾರ್ಥಿ ಶಿವರಾಜ್ ಉಪ್ಪಾರ ಮತ್ತು ಮಲ್ಲಿಕಾರ್ಜುನ ಶಿವಾಜಿ ಜಯಂತಿ ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾರ್ವತಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು ಕುಮಾರಿ ನಕ್ಷತ್ರ ಅಚನೂರ ಸ್ವಾಗತಿಸಿದರು ಕುಮಾರಿ ಸೌಜನ್ಯ ದೇಸಾಯಿ ವಂದಿಸಿದರು ಸುಮಾ ನಿರೂಪಿಸಿದರು. ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 