ಛತ್ರಪತಿ ಶಿವಾಜಿ ಮಹರಾಜರ ಉತ್ಸವ ಮೂರ್ತಿ ಮೆರವಣಿಗೆ

ಶಿಗ್ಗಾವಿ22 : ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹರಾಜರ 393 ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಛತ್ರಪತಿ ಶಿವಾಜಿ ಮಹರಾಜರ ಉತ್ಸವ ಮೂರ್ತಿಮೆರವಣಿಗೆಗೆ ತಹಸೀಲ್ದಾರ ಪ್ರಕಾಶ ಕುದರಿ ಚಾಲನೆ ನೀಡಿದರು.

     ಮೆರವಣಿಗೆ ತುಳಜಾಭವಾನಿ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು. ಮೆರವಣಿಗೆಯನ್ನು ಸಾರ್ವಜನಿಕರು, ಮಹಿಳೆಯರು ರಸ್ತೆಯ ಉದ್ದಕ್ಕೂ, ತಳಿರು, ತೋರಣ ಕಟ್ಟಿ, ರಂಗೋಲಿ ಹಾಕಿ ಭವ್ಯವಾಗಿ ಬರಮಾಡಿಕೊಂಡರು. ಯುವಕರು ತಮ್ಮ, ತಮ್ಮ ಬೈಕ್ ಗಳಿಗೆ ಶಿವಾಜಿ ಮಹರಾಜರ ಕೇಸರಿ ಭಾವುಟ ಕಟ್ಟಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸುವಮೂಲಕ ಶಿವಾಜಿ ಮಹರಾಜರ ಜಯಂತ್ಯುತ್ಸವಕ್ಕೆ ಮೆರಗು ತಂದರು, ಮಹಿಳೆಯರು ಕೂಡಾ ಕೇಸರಿ ಟೋಪಿ ಧರಸಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಸಾರ್ವಜನಿಕರ ಆಕರ್ಷಣೆಗೆ ಒಳಗಾದರು. ಮೆರವಣಿಗೆ ಉದ್ದಕ್ಕೂ ಡಿ.ಜೆ. ಹಾಡಿಗೆ ಯುವ ಪಡೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಕೇಸರಿ ಭಾವುಟಗಳು ರಾಜಾಜಿಸುತ್ತಿದ್ದವು. ಮೇರವಣಿಗೆ ಸಾಗಿಬಂದು ಪುನ: ಶ್ರೀ ತುಳಜಾ ಭವಾನಿ ದೇವಸ್ಥಾನದ ಆವರಣಕ್ಕೆ ಬಂದು ಸಮಾರೋಪಗೊಂಡಿತು.

     ಪಿ.ಎಸ್.ಐ. ಸಂತೋಷ ಪಾಟೀಲ, ಕೆ.ಎನ್.ಹಳ್ಳಿಯವರ, ಮುಖಂಡರಾದ ನಿಂಗರಾಜ ಬಾಳಂಬೀಡ, ರಾಜು ಜಾದವ, ಶೇಖಪ್ಪ ರಾಮಾಪುರ, ರಾಕೇಶ ಪುಜಾರ, ರಾಜು ಹುಲಮನಿ, ಗದಿಗೇಪ್ಪ ಬಳ್ಳಾರಿ, ಬೀಮಪ್ಪ ಗಣಪ್ಪನವರ, ಸಚಿನ್ ಗಣಪ್ಪನವರ, ಸುರೇಶ ಉಥಳೆಕರ, ಪ್ರಕಾಶ ಪುಜಾರ, ಚಂದ್ರು ಪುಜಾರ, ಮಾಲತೇಶ ಗಣಪ್ಪನವರ ಸೇರಿದಂತೆ ಮತ್ತಿತರರು ಇದ್ದರು. 

ಫೋಟೋ : ಬಂಕಾಪುರದಲ್ಲಿ ಶಿವಾಜಿ ಮಹರಾಜರ 393 ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಛತ್ರಪತಿ ಶಿವಾಜಿ ಮಹರಾಜರ ಉತ್ಸವ ಮೂತರ್ಿ ಮೇರವಣಿಗೆಗೆ ತಹಸೀಲ್ದಾರ ಪ್ರಕಾಶ ಕುದರಿ ಚಾಲನೆ ನೀಡಿದರು.