ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನ
ತಾಳಿಕೋಟಿ 19 : ತಾಲೂಕಾ ತಹಶೀಲ್ದಾರ್ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಆದಂತಹ ಶ್ರೀಮತಿ ಕೀರ್ತಿ ಚಾಲಕ ಅವರು ವಹಿಸಿದ್ದರು.ಅತಿಥಿಗಳಾಗಿ ಆರೋಗ್ಯಾಧಿಕಾರಿಗಳಾದ ಡಾಕ್ಟರ್ ಹುಕ್ಕೇರಿ ಅವರು ಮರಾಠಾ ಸಮಾಜದ ಅಧ್ಯಕ್ಷರಾದ ಶ್ರೀ ಸಂಭಾಜಿರಾವ ಗೋ. ವಾಡಕರ.ಅವರು ಮುಖ್ಯ ಅತಿಥಿಗಳಾಗಿ ಮತ್ತು ಹಿರಿಯ ಪತ್ರಕರ್ತರಾದ ಜಿ ಟಿ ಘೋರೆ್ಡ ಅವರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಕಾರ್ಯದರ್ಶಿಗಳಾದ ಶ್ರೀ ಕಾಶೀರಾಯ ಮೋಹಿತೆ ಅವರು ಶಿವಾಜಿ ಮಹಾರಾಜರ ಕುರಿತು ಮಾತನಾಡಿದರು.ಇನ್ನೋರ್ವರಾದ ಶ್ರೀ ರಂಗನಾಥ ನೂಲಿಕರ ಅವರು ಶಿವಾಜಿ ಮಹಾರಾಜರ ಬಗ್ಗೆ ಅವರ ಜೀವನದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ಶ್ರೀ ರಾಜು ವಿಜಾಪೂರ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.ಕ್ಷತ್ರೀಯ ಮರಾಠಾ ಸಮಾಜದ ಮುಖಂಡರುಗಳಾದ ಶಶೀಧರ ಡಿಸಲೆ, ಎಸ್ ವಿ ಸಾಳುಂಕೆ, ಗುಂಡುರಾವ್ ಜಗತಾಪ, ಧನಂಜಯ ಶಿಂಧೆ,ಸುಭಾಸ ಗಾವಡೆ, ನಾರಾಯಣ ಸುಬೇದಾರ, ವಿಠ್ಠಲ ಮೋಹಿತೆ, ಸಂಜೀವ ಕದಂ, ಸಂತೋಷ ಸುಬೇದಾರ, ತಾನಾಜಿ ಕದಂ, ಈಶ್ವರ ಹೂಗಾರ ಗುರುರಾಜ ಮಾನೆ ಮೊದಲಾದವರಿದ್ದರು.