ಛತ್ರಪತಿ ಶಿವಾಜಿಯ ಸಮ ಸಮಾಜ ಆದರ್ಶ ಪ್ರತಿಯೊಬ್ಬರಿಗೂ ಮಾದರಿ

ಗದಗ 19: ಶಿವಾಜಿ ಮಹಾರಾಜರು ಸಮ ಸಮಾಜಕ್ಕಾಗಿ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಅವರ ಈ ಆದರ್ಶ ಸರ್ವರಿಗೂ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶ್ಕುಮಾರ್ ನುಡಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕ್ಷತ್ರೀಯ ಮಹಾಸಭಾ ಸಹಯೋಗದಲ್ಲಿ ಮರಾಠಾ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಶಿವಾಜಿ ಮಹಾರಾಜರು ಇಡೀ ಮಾನವ ಸಮುದಾಯದ ಏಳಿಗೆಗಾಗಿ ನಿಸ್ವಾರ್ಥದಿಂದ ಶ್ರಮಿಸಿದ್ದಾರೆ. ಶಿವಾಜಿಯ ಜೀವನ ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸುವದಲ್ಲದೇ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನುಡಿದರು.

ವಿನಾಯಕ ತಲಗೇರಿ ಶಿವಾಜಿ ಜೀವನದ ಸಂದೇಶ ಕುರಿತು ಉಪನ್ಯಾಸ ನೀಡಿ ಸಮಾಜದ ಕಲ್ಯಾಣಕ್ಕಾಗಿ,  ದೇಶದ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಮಹಾರಾಜರು ನಾಡಿಗಾಗಿ ತಮ್ಮ ಜೀವನವನ್ನೆ ಸಮಪರ್ಿಸಿದ್ದಾರೆ ಎಂದರು. ಲೋಕದ ಶಾಂತಿಗಾಗಿ ಹಗಲಿರುಳು ಶ್ರಮಿಸಿದ, ಶಿವಾಜಿಯ ಆಡಳಿತದಲ್ಲಿ ಸರ್ವಧಮರ್ಿಯರು ಅನ್ಯೋನ್ಯವಾಗಿದ್ದರು. ಶಿವಾಜಿಯು ಜನರ ಹೃದಯಾಂತಾರಾಳದಲ್ಲಿ ದೇಶಪ್ರೇಮ ಮೂಡಿಸಿದ್ದಲ್ಲದೇ ಶೌರ್ಯ, ಧೈರ್ಯಕ್ಕೆ ಹೆಸರುವಾಸಿಯಾಗಿದ್ದ ಅವರಿಗೆ ಬಾಲ್ಯದಲ್ಲಿ ತಾಯಿಯಿಂದ ಒಳ್ಳೆಯ ಸಂಸ್ಕಾರ ಸಿಕ್ಕಿತು. ಉತ್ತಮ ಆಡಳಿತಗಾರರು, ರಾಜನೀತಿತಜ್ಞರು ಆಗಿದ್ದ ಶಿವಾಜಿಯು ಧರ್ಮದ ಬಗ್ಗೆ ಅಭಿಮಾನ ಜೊತೆಗೆ ಇತರರನ್ನ ಗೌರವಿಸುವ ವಿಶೇಷ ಗುಣ ಹೊಂದಿದ್ದರು ಎಂದು ತಲಗೇರಿ ನುಡಿದರು. 

ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿವೈಎಸ್ಪಿ ಎಸ್.ಕೆ.ಪ್ರಹ್ಲಾದ್, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರುಣ್ಕುಮಾರ್ ಚವ್ಹಾಣ, ಮೋಹನ್ರಾವ್ ಗ್ವಾರಿ, ಮೋಹನ್ರಾವ್ ಸಾಳುಂಕೆ, ಶ್ರೀಕಾಂತ ಖಟವಟೆ, ಪ್ರಕಾಶ ಬಾಕಳೆ, ಎಂ.ಸಿ. ಶೇಖ್ ಹಾಗೂ ಕ್ಷತ್ರೀಯ ಸಮಾಜದ ಗಣ್ಯರು, ಗುರುಹಿರಿಯರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ವೀರಯ್ಯಸ್ವಾಮಿ ಅವರು ಸರ್ವರನ್ನು ಸ್ವಾಗತಿಸಿ, ವಂದಿಸಿದರು.