ಛತ್ರಪತಿ ಶಿವಾಜಿಯ ಶೌರ್ಯ ಆದರ್ಶನೀಯ: ಕವಟಿಗಿಮಠ

Chhatrapati Shivaji's bravery is exemplary: Kavatagimath

ಮಾಂಜರಿ 20: ದೇಶ ಮತ್ತು ಧರ್ಮಕ್ಕಾಗಿ ಮಿಡಿಯುವ ಹೃದಯ, ಶತ್ರುವಿಗಾಗಿ ಸಿಡಿಯುವ ಕ್ರೋಧ ಇರುವ ರಾಷ್ಟ್ರೀಯ ಯೋಧ ಛತ್ರಪತಿ ಶಿವಾಜಿಯ ಶೌರ್ಯ ಆದರ್ಶನೀಯ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ  ಮಹಾಂತೇಶ್ ಕವಟಿಗಿಮಠ ಹೇಳಿದರು.  

ಅವರು ಬುಧವಾರರಂದು ಸಮೀಪದ ಶಿರಗಾವ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 395ನೇ ಶಿವಾಜಿ ಜಯಂತೋತ್ಸವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ  ಪುತ್ಥಳಿ ಅನಾವರಣ ಸಮಾರಂಭದಲ್ಲಿ  ಭಾಗವಹಿಸಿ ಅವರು ಮಾತನಾಡಿ, ಎಲ್ಲ ತಾಯಂದಿರು ಜೀಜಾಬಾಯಿಯಂತಾದರೆ ಮನೆಗೊಬ್ಬ ರಾಷ್ಟ್ರ್ರಾಮಿ ಮಗ ಹುಟ್ಟುತ್ತಾನೆ. ದೇಶಕ್ಕಾಗಿ ಮಡಿದ ಯೋಧರಿಗೆ ಮತ್ತೆ ಹುಟ್ಟಿ ಬಾ ಎಂದು ಪೋಸ್ಟ್‌ ಹಾಕುವ ಬದಲು ಅವರ ದಾರಿಯಲ್ಲಿ ನಡೆದು ಅವರ ಸ್ಥಾನ ತುಂಬುವ ಆದರ್ಶವಂತರಾಗಬೇಕು ಎಂದರು.  

ಪರಮಪೂಜ್ಯ ನರಸಿಂಗೇಶ್ವರ ಮಹಾ ಸ್ವಾಮೀಜಿಗಳು  ಮಾತನಾಡಿ, ಸಂಸ್ಕಾರದ ಶಿಕ್ಷಣ ಮತ್ತು ರಾಷ್ಟ್ರಾಭಿಮಾನ, ಯುದ್ಧ ಕಲೆ ಮತ್ತು ಕೌಶಲ್ಯಗಳ ಶಕ್ತಿಯಿಂದ ಮೊಘಲರನ್ನು ಬಗ್ಗು ಬಡಿದು, ಸಾಮ್ರಾಜ್ಯ ವಿಸ್ತರಿಸಿ ಹಿಂದೂ ಧರ್ಮ ಪ್ರತಿಷ್ಟಾಪಿಸಿ, ನ್ಯಾಯ, ಸಮಾನತೆಗಳಿಗಾಗಿ ತಮ್ಮನ್ನೇ ಸಮರ​‍್ಿಸಿಕೊಂಡ ಚಕ್ರವರ್ತಿ ಶಿವಾಜಿ ಮಹಾರಾಜರ ರಾಷ್ಟ್ರ್ರೇ​‍್ರಮ ಯುವಕರಿಗೆ ಆದರ್ಶವಾಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಶಿವಾಜಿ ಕಂಚಿನ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪವೃಷ್ಟಿ ಮಾಡಲಾಯಿತು 

ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ ಮರಾಠ ಸಮಾಜ ಬಾಂಧವರು ಮತ್ತು ನಾಗರಿಕರ ಸಹಕಾರದಿಂದ ಈ ಪುತ್ತಳಿಯನ್ನು ನಿರ್ಮಿಸಲಾಗಿದ್ದು ಮುಂದಿನ ದಿನಮಾನಗಳಲ್ಲಿ ಯುವ ಪೀಳಿಗೆಗೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಆದರ್ಶಮಯವಾಗಲಿದೆ ಎಂದು ಅವರು ಹೇಳಿದರು. 

ನೀವೇ ಗೋಪಾಲ್ ಮಹಾಮನಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮಹಾ ಸಚಿವ ವಿಠಲ್ ಮಾಳಿ ಅನಿಸಿಕೆ ವ್ಯಕ್ತಪಡಿಸಿದರು. ಶಿರಗಾವ ಗ್ರಾಮದ ಗಣ್ಯ ನಾಗರಿಕರಾದ ಗೌರವ ಸಿಂಹ  ದೇಸಾಯಿ ಸರಕಾರ ಉಪಸ್ಥಿತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಪೂಜೆಯನ್ನು ಸಲ್ಲಿಸಲಾಯಿತು. 

ಗ್ರಾಮದ ಮುಖಂಡರು ಹಾಗೂ ಮಾರಾಠಾ ಸಮಾಜ ಬಾಂಧವರು ಹಾಜರಿದ್ದರು.