ನೀರಿನ ಮಾದರಿಗಳನ್ನು ನಿಯಮಿತಾಗಿ ತಪಾಸಣೆ ಮಾಡಿ

ನೀರಿನ ಮಾದರಿಗಳನ್ನು ನಿಯಮಿತಾಗಿ ತಪಾಸಣೆ ಮಾಡಿ Check water samples regularly.


ಕಾರವಾರ, ಫೆ.12:-  ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರು ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಬೇಕು, ಪರೀಕ್ಷೆ ಸಂದರ್ಭದಲ್ಲಿ ಏನಾದರೂ ವ್ಯತ್ಯಾಸಗಳು ಕಂಡು ಬಂದಲ್ಲಿ ಅಂತಹ ನೀರಿನ ಮಾದರಿಗಳನ್ನು ಕೂಡಲೇ ಗ್ರಾಮ ಪಂಚಾಯಿತಿ ಮೂಲಕ ತಾಲೂಕ ಲ್ಯಾಬ್ ಗೆ ಭೇಟಿ ನೀಡಿ ಅದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯುವಂತೆ ತಾಲೂಕ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ಪ್ರಸನ್ನ ಸೂಚಿಸಿದರು. 

 ಅವರು ಇತ್ತೀಚಿಗೆ ಹಳಿಯಾಳ ತಾಲೂಕ ಪಂಚಾಯತ್ ಸಭಾಭವನದಲ್ಲಿ ನಡೆದ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪ್ರಯೋಗಾಲಯದ ವತಿಯಿಂದ ನಡೆದ ನೀರಿನ ಫೀಲ್ಡ್‌ ಟೆಸ್ಟ್‌ ಕಿಟ್ ತರಬೇತಿ ಹಾಗೂ ಅಭಿಯಾನದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಪಂಚಾಯಿತಿ ಮಟ್ಟದ ಪರೀಕ್ಷೆ ನಡೆಸುವವರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಪರೀಕ್ಷೆಗಾಗಿ ತಮಗೆ ನೀಡಿರುವ ಕಿಟ್ ಮೂಲಕ ನೀರಿನ ಪರೀಕ್ಷೆ ನಡೆಸುವುದು ಅತೀ ಅಗತ್ಯವಾಗಿದೆ. ಪರೀಕ್ಷೆಗಳನ್ನು ಯಾವ ರೀತಿ ಮಾಡಬೇಕು, ಎಫ್ ಟಿ ಕೆ ಕಿಟ್ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಮಾಡಿದ ನಂತರ, ಫಲಿತಾಂಶದಲ್ಲಿ ಯಾವುದೇ ಅಸಾಮಾನ್ಯತೆ ಅಥವಾ ಸಮಸ್ಯೆ ಕಂಡುಬಂದಲ್ಲಿ, ತಕ್ಷಣ ಅಗತ್ಯ ಸುರಕ್ಷತಾ  ಕ್ರಮಗಳನ್ನು ಕೈಗೊಳ್ಳಬೇಕು. ನೀರಿನಲ್ಲಿ ಮಿತಿಗಿಂತ ಜಾಸ್ತಿ ಯಾವುದೇ ಖನಿಜಾಂಶ ಇದ್ದರೂ ಅಂತಹ ನೀರನ್ನು ಸೇವಿಸಿದಾಗ ರೋಗಗಳು ಬರುವ ಅಪಾಯವಿದೆ ಎಂದರು.   

ಕುಡಿಯುವ ನೀರಿನ ಮಾದರಿ ಪರೀಕ್ಷೆ ನಡೆಸುವವರು ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ಮಾಡಬೇಕು,  ನಿಗದಿತ ಸಮಯಕ್ಕೆ ಸರಿಯಾಗಿ ನೀರಿನ ಪರೀಕ್ಷೆಯನ್ನು ಮಾಡಿ ದಾಖಲೀಕರಣ ಮಾಡಬೇಕಿದ್ದು, ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಯ ಸಂದರ್ಭ ಯಾವುದೇ ವ್ಯತ್ಯಾಸಗಳು ಕಂಡುಬಂದರೂ ತತ್‌ಕ್ಷಣ ಜಿಲ್ಲಾ ಪ್ರಯೋಗಾಲಯಕ್ಕೆ ವರದಿ ನೀಡಬೇಕು. ಕೆಲವೊಂದು ಸಂದರ್ಭದಲ್ಲಿ ಕೊಳಚೆ ಹೊಂಡಗಳ ನೀರು ಬಾವಿಯನ್ನು ಸೇರಿ ಕಲುಷಿತಗೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿಯ ಸಂದರ್ಭದಲ್ಲೂ ಖಾಸಗಿಯವರ ಬಾವಿ,

ಕೆರೆಗಳ ನೀರನ್ನು ಪರೀಕ್ಷೆ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಹಳಿಯಾಳದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಬಿರಾದಾರ ತಿಳಿಸಿದರು. ಜಿಲ್ಲೆಯ ಜೆಜೆಎಮ್ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶ್ ನಾಯ್ಕ್‌ ಪ್ರಾಸ್ತವಿಕವಾಗಿ ಮಾತನಾಡಿ, ಫೀಲ್ಡ್‌ ಟೆಸ್ಟ್‌ ಕಿಟ್ ಅಭಿಯಾನವನ್ನು ಕಡ್ಡಾಯವಾಗಿ ಹಮ್ಮಿಕೊಂಡು. ಎಲ್ಲಾ ಗ್ರಾಮಗಳ ನೀರಿನ ಮಾದರಿಗಳನ್ನು ರಾಜ್ಯ ಕಚೇರಿಯ ಘಕಿಒಋ ( ಡಬ್ಲ್ಯೂ.ಕ್ಯೂ.ಎಮ್‌.ಐ.ಎಸ್ ನಲ್ಲಿ ಫೀಲ್ಡ್‌ ಟೆಸ್ಟ್‌ ಕಿಟ್ ಮೂಲಕ ಪರೀಕ್ಷೆ ಮಾಡಿರುವ ಬಗ್ಗೆ ಗ್ರಾಮ ಪಂಚಾಯತ್ ನ ಅಧಿಕಾರಿ / ಸಿಬ್ಬಂದಿಗಳ ಸಹಾಯದೊಂದಿಗೆ ಅಪ್ಲೋಡ್ ಮಾಡಿ ಪ್ರಗತಿ ಸಾದಿಸುವಂತೆ ಮಾಹಿತಿ ನೀಡಿದರು. 

 ಹಳಿಯಾಳ ಉಪ ವಿಭಾಗದ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಲಯ ವಿಶ್ಲೇಷಕರು ನೀರಿನ ಮಾದರಿ ಸಂಗ್ರಹಣೆ, ನೀರಿನ ಮೂಲದ ಚಿಟಿಣಚಿಡಿಥಿ ಣಡಿತಚಿಥಿ ಮಾಹಿತಿ, ಈಖಿಏ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಮತ್ತು ಘಕಿಒಋ ಠಿಠಣಚಿಟ ನಲ್ಲಿ ಖಿಣ ಖಜಠಿಠಣ ಣಠಿಟಠಜ ಮಾಡುವುದನ್ನು ತಿಳಿಸಿದರು.  

ತರಬೇತಿ ಕಾರ್ಯಾಗಾರದಲ್ಲಿ ಹಳಿಯಾಳ ತಾಲೂಕಿನ ಆರ್‌.ಡಿ.ಡಬ್ಲ್ಯೂ.ಎಸ್‌.ಡಿ ಉಪ ವಿಭಾಗದ ಸಹಾಯಕ ಇಂಜಿನಿಯರ್ , ಜೂನಿಯರ್ ಇಂಜಿನಿಯರ್, ತಾಲೂಕ ಪಂಚಾಯತ್ ನ ವ್ಯವಸ್ಥಾಪಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ನೀರು, ್ಘ ನೈರ್ಮಲ್ಯ ಸಮಿತಿ ಸದಸ್ಯರುಗಳು, ಡಾಟಾ ಎಂಟ್ರಿ ಒಪರೇಟರ್ ಗಳು, ವಾಟರ್ ಮ್ಯಾನ್ ಗಳು ಹಾಗೂ ತಾಲೂಕ ಪಂಚಾಯತ್ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. 


Water Quality Testing Rural Water Supply Field Test Kit Water Contamination Drinking Water Standards District Laboratory Water Safety