ದಾನ ಧರ್ಮಗಳೆ ಕೈಗೆ ಭೂಷಣ: ಚಂದ್ರು ಬಗನಾಳ

ದಾನ ಧರ್ಮಗಳೆ ಕೈಗೆ ಭೂಷಣ: ಚಂದ್ರು ಬಗನಾಳ  Charity is an ornament to the hands of religions: Chandru Baganal

ಕುಕನೂರ 28:  ನಮ್ಮ ಕೈಗಳಿಗೆ ಬಂಗಾರಕ್ಕಿಂತ ದಾನ ಧರ್ಮಗಳೇ  ನಿಜವಾದ ಭೂಷಣ ಎಂದು ಯುವ ಮುಖಂಡ ಚಂದ್ರು ಬಗನಾಳ ಹೇಳಿದರು.  ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದ ವತಿಯಿಂದ ಶ್ರೀಮಠದ ಜಾತ್ರ ನಿಮಿತ್ಯ ನಡೆದ ಸದ್ಬಾವನ ಪಾದಯಾತ್ರೆಲ್ಲಿ ಪಾಲ್ಗೊಂಡು ಮಾತನಾಡುತ್ತಾ  ಮನುಷ್ಯ ಪರೋಪಕಾರಿಯಾಗಿ ಬದುಕಬೇಕು ಸಮಾಜದಲ್ಲಿರುವ ನೋಂದವರ ಬೆಂದವರ ದ್ವನಿಯಾಗಬೇಕು, ಮಠ ದೇವಾಲಯಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ತನು ಮನ ಧನದಿಂದ ಸೇವೆ ಮಾಡಬೇಕು ಜೊತೆಗೆ ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿರುತ್ತದೆ ಎಂದರು.  ರೈತ ಮುಖಂಡ ಬಸಣ್ಣ ಈಬೇರಿ ಮಾತನಾಡಿ ಅನ್ನದಾನೀಶ್ವರ ಮಠ ತನ್ನದೇ ಆದ ಇತಿಹಾಸ ಪರಂಪರೆ ಹೊಂದಿದೆ,  

ನಮ್ಮೂರಿಗೆ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರ, ಮಠ ಮಾನ್ಯಗಳ ಸೇವೆಯನ್ನ ಎಲ್ಲಾರು ಮಾಡಬೇಕು, ಭಕ್ತರ ಕಲ್ಯಾಣವೇ ಮಠಗಳ ಮೂಲ ಉದ್ದೇಶವಾಗಿದೆ ಎಂದರು. ಜಾತ್ರ ಸಮಿತಿ ಉಪಾಧ್ಯಕ್ಷ ಶಿವುಕುಮಾರ ಯತ್ನಟ್ಟಿ ಮಾತನಾಡಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ನಡೆಯುವ ಪಾದಯಾತ್ರೆಗೆ ಭಕ್ತರ ಸಹಕಾರ ಅವಶ್ಯ, ಭಕ್ತರ ದೇಣಿಗೆಯಿಂದ ನೂತನ ತೇರು ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.  ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ,  ಸಂಗಮೇಶ ಕಲ್ಮಠ, ಗದಿಗೆಪ್ಪ ಪವಾಡಶೆಟ್ಟಿ,  ಪ್ರಭು ಶಿಸಿಂಪರ, ಆನಂದ ಯತ್ನಟ್ಟಿ, ಆನಂದ ಮಡಿವಾಳರ, ಸೋಮಣ್ಣ ಅರಕೇರಿ, ಈಶಪ್ಪ, ಗುದ್ನೇಶ ಬಾಗೇವಾಡಿ, ದೇವಪ್ಪ ರಾಟಿಮನಿ, ಈಶಪ್ಪ ಸಬರದ, ಶಿವಪ್ಪ ಶಿಳ್ಳಿನ ಮತ್ತು ಇತರರು ಇದ್ದರು.