ಲೋಕದರ್ಶನ ವರದಿ
ಮಾಂಜರಿ 05: ಸಮೀಪದ ನೇಜಗ್ರಾಮದ ಚಂದ್ರವ್ವಾ ತಾಯಿದೇವಿಯ ಜಾತ್ರೆಯ (ನಾಗಝರಿಮಠ) ಚಂದ್ರವ್ವಾ ತಾಯಿದೇವಿಯ ರಥೋತ್ಸವ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಇಂದು ಜರುಗಿದವು.
ಪಲ್ಲಕ್ಕಿ ಮೇರವಣಿಗೆ, ಸಾಯಂಕಾಲ ಗ್ರಾಮಸ್ಥರಿಂದ ಉಡಿ ತುಂಬುವ ಕಾರ್ಯಕ್ರಮ. ಹಾಗೂ ಚಂದ್ರವ್ವಾ ತಾಯಿಯ ಘೋಷಣೆಯೊಂದಿಗೆ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ರಥೋತ್ಸವ ಕಾರ್ಯಕ್ರಮ ಅಪಾರ ಸಂಖ್ಯೆ ಭಕ್ತರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಜರುಗಿತು.
ಬಸ್ಸಪ್ಪಾ ಸಂಗಪ್ಪಗೊಳ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಪಂ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಕನರ್ಾಟಕ-ಮಹಾರಾಷ್ಟ್ರದ ಗಡಿಭಾಗದ ಭಕ್ತರು ಪಾಲ್ಗೊಂಡಿದ್ದರು.
ಅಂತರ್ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಚಂದ್ರವ್ವಾತಾಯಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಅಂತರ್ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಕ್ರಮಾಂಕದಜಂಗಿ ನಿಕಾಲಿ ಕುಸ್ತಿಯಲ್ಲಿ ಭಾರತಕೇಸರಿ ಶುಭಂ ಸಿದ್ನಾಳೆಯವರು ಇವರು ಮಹಾರಾಷ್ಟ್ರದ ಪುಣೆಯ ಪೈಲ್ವಾನಜಯಪಾಲ ಯಾದವ ಇವರನ್ನು ಘಿಸ್ಸಾ ಆಟವಾಡುವದರ ಮೂಲಕ ಪರಾಭವಗೊಳಿಸಿ ನಗದು ಬಹುಮಾನ ಮತ್ತು ಪ್ರಶಸ್ತಿ ಗಿಟ್ಟಿಸಿಕೊಂಡರು.
ದ್ವಿತಿಯಕ್ರಮಾಂಕದ ಕುಸ್ತಿಯಲ್ಲಿ ಮಹಾರಾಷ್ಟ್ರಚಾಂಪಿಯನ್ ಸಶಿಕಾಂತ ಬೊಂಗರಡೆ ಇವರು ಕೊಲ್ಲಾಪೂರ ಪೈಲ್ವಾನರೋಹಿತ್ ಶೆಟ್ಟಿವರನ್ನು ಅಕಡಿ ಆಟ ಆಡುವುದರ ಮೂಲಕ ಪರಾಭವ ಗೊಳಿಸಿದರು. ತೃತಿಯಕ ್ರಮಾಂಕದ ಆಟದಲ್ಲಿ ಪೈಲ್ವಾನ ಅಪ್ಪಾಸಾಬ ಇಂಗಳಗಿಯವರು ಇವರು ಪೈಲ್ವಾನ ನವನಾಥ ಇಂಗಳೆ ಅವರನ್ನು ಏಕಲಂಗಿ ಆಟವಾಡುವುದರ ಮೂಲಕ ಪರಾಭವಗೊಳಿಸಿದರು.
ನಾಲ್ಕನೆ ಕ್ರಮಾಂಕದ ಕುಸ್ತಿಯು ಪೈಲ್ವಾನ ವೈಭವ ಶೇಟ್ಟಿ ಮತ್ತು ಪೈಲ್ವಾನ ನಿರೂಪಾಧಿ ದಡ್ಡಿತಡವಾದರೂ ಫಲಿತಾಂಷ ಬಾರದೆ ಇರುವುದರಿಂದ ಡ್ರಾ ಎಂದು ಘೋಷಿಸಿದರು. ಐದನೆ ಕ್ರಮಾಂಕದ ಆಟದಲ್ಲಿ ಪೈಲ್ವಾನ ಇಂದ್ರಜೀತ ಮಗದುಮ್ಮಅವರು ಪೈಲ್ವಾನರಂಗಾ ದಾವಣಗೇರೆ ಅವರನ್ನು ಡಂಕಿ ಆಟ ವಾಡುವುದರ ಮೂಲಕ ಪರಾಭವಗೊಳಿಸಿದರು.
6 ನೇ ಮತ್ತು 7 ನೇ ಕ್ರಮಾಂಕದ ಜೊತೆಗೆ 50 ಕ್ಕೂ ಹೆಚ್ಚು ಕುಸ್ತಿ ಪಟುಗಳು ತಮ್ಮ ಕ್ರೀಡೆಯನ್ನು ಪ್ರದಶರ್ಿಸಿದರು. ಸುಮಾರು 3 ಗಂಟೆಗಳ ಕಾಲ ಕುಸ್ತಿ ಪಂದ್ಯಾವಳಿಗಳು ನಡೆದವು. ಮುಖಂಡರು,ಕಮಿಟಿ ಸದಸ್ಯರು, ಗ್ರಾಪಂ ಸದಸ್ಯರು, ಪಶ್ಚಿಮ ಮಹಾರಾಷ್ಟ್ರ ಮತ್ತು ಉತ್ತರ ಕನರ್ಾಟಕದ ಕ್ರೀಡಾ ರಸಿಕರು, ರೈತರು, ಗ್ರಾಮೀಣ ಸೊಗಡಿನ ಕುಸ್ತಿ ಪಂದ್ಯಾವಳಿ ವಿಕ್ಷೀಸಲು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಪಟುಗಳಿಗೆ ಹುರಿತುಂಬಿಸುವ ಜೊತೆಗೆ ಪ್ರೋತ್ಸಾಹ ನೀಡಿದರು. ಕುಸ್ತಿ ವೀಕ್ಷಿಸಲು ಸಹಸ್ರಾರು ಜನ ಪಾಲ್ಗೋಂಡಿದ್ದರು.