ಮೊಳಗಿದ ಜೈ ಶ್ರೀರಾಮ-ಜೈ ಹನುಮಾನ ಘೋಷಣೆಗಳು : ಹಾರೂಗೇರಿಯಲ್ಲಿ ಹನುಮಾನ ಜಯಂತಿ ವೈಭವ ಮಾರುತಿ ದೇವರ ಭವ್ಯ ರಥೋತ್ಸವ

ಮೊಳಗಿದ ಜೈ ಶ್ರೀರಾಮ-ಜೈ ಹನುಮಾನ ಘೋಷಣೆಗಳು : ಹಾರೂಗೇರಿಯಲ್ಲಿ ಹನುಮಾನ ಜಯಂತಿ ವೈಭವ ಮಾರುತಿ ದೇವರ ಭವ್ಯ ರಥೋತ್ಸವ Chants of Jai Shri Ram and Jai Hanuman rang out: Hanuman Jayanti in Harugeri, a grand chariot festiv

ಲೋಕದರ್ಶನ ವರದಿ 

ಹಾರೂಗೇರಿ 03 : ಹಾರೂಗೇರಿ ಗ್ರಾಮದೇವರು ಮಾರುತಿ ಜಯಂತಿ ಉತ್ಸವದ ನಿಮಿತ್ತ ಗುರುವಾರ ಸಂಜೆ ಶ್ರದ್ಧಾ ಭಕ್ತಿಯೊಂದಿಗೆ ಸಾವಿರಾರು ಭಕ್ತಾಧಿಗಳ ಹರ್ಷೋದ್ಘಾರದ ಮದ್ಯೆ 25 ಅಡಿ ಎತ್ತರದ ಮಾರುತಿ ದೇವರ ಭವ್ಯ ರಥೋತ್ಸವ ನಡೆಯಿತು.  

  ಸಂಜೆ 5ಕ್ಕೆ ಸರ್ವಾಲಂಕೃತಗೊಂಡ ಮಾರುತಿ ದೇವರಿಗೆ ದೇವಸ್ಥಾನದ ಪೂಜಾರಿಗಳು ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜ್ಯ ಹಾಗೂ ಮಹಾರಾಷ್ಟ್ರದ ನಾನಾ ಭಾಗಗಳಿಂದಾಗಮಿಸಿದ ಸಾವಿರಾರು ಭಕ್ತರ ಜೈ ಶ್ರೀರಾಮ, ಜೈ ಹನುಮಾನಜೀ ಎಂಬ ಮಂತ್ರಘೋಷಗಳು ಮುಗಿಲು ಮುಟ್ಟಿದವು. ಶ್ರೀ ಮಾರುತಿ ದೇವಸ್ಥಾನದಿಂದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ಹಳೆಬಸ್‌ನಿಲ್ದಾಣ ಮಾರ್ಗವಾಗಿ ಮುಖ್ಯರಸ್ತೆಯ ಮೂಲಕ ಶಂಕರಬಾವಿವರೆಗೆ ಶ್ರೀ ಮಾರುತಿ ದೇವರ ಮೂರ್ತಿಯನ್ನು ಹೊತ್ತ ರಥ ಗಾಂಭೀರ್ಯದಿಂದ ಸಾಗಿತು. 

   ರಥ ಸಾಗುವಾಗ ಭಕ್ತಾಧಿಗಳು ಶ್ರೀರಾಮ ಭಕ್ತ ಹನುಮಂತನ ಜೈಕಾರ ಹಾಕುತ್ತ ಖಾರಿಕ್, ಬೇತ್ತಾಸ್, ಹೂ-ಹಣ್ಣು, ಕಾಯಿ, ಮುತ್ತುಗಳನ್ನು ಹಾರಿಸಿದರು. ಜಾಂಜ್ ಹಾಗೂ ಸಕಲ ವಾಧ್ಯಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. 

  ಬೆಳಿಗ್ಗೆ ಮಾರುತಿ ದೇವರ ಪಲ್ಲಕ್ಕಿ ಉತ್ಸವ, ಮಹಾಪೂಜೆ, ಅಭಿಷೇಕ ನೆರವೇರಿತು. ನಸುಕಿನ ಜಾವದಲ್ಲಿ ಸಾವಿರಾರು ಭಕ್ತರು ಮಾರುತಿ ದೇವರಿಎ ಹರಕೆಹೊತ್ತು ಉರುಳು ದೇವೆ ಸಲ್ಲಿಸಿದರು. ಬುಧವಾರ ಭಕ್ತಾಧಿಗಳು ಚಕ್ಕಡಿ ಮತ್ತು ಟ್ರಾಕ್ಟರ್ ಮೂಲಕ ಮಾರುತಿ ಕೊಂಡದಲ್ಲಿ ನೀರು ತುಂಬಿಸಿದರು. ಸಂಜೆ ನಡುಓಕುಳಿ (ನೀರೋಕಳಿ) ನಡೆಯಿತು. 

   ಗ್ರಾಮ ದೇವರು ಮಾರುತಿ ಜಯಂತಿ ಉತ್ಸವ ನಿಮಿತ್ತ ಮಂಗಳವಾರ ರಂಗೋಲಿ ಮತ್ತು ಚೆಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಅಂದು ಸಂಜೆ ಪೂಜಾರಿಗಳು ಮತ್ತು ಮುಖಂಡರಿಂದ ಕೊಂಡಪೂಜೆ ಹಾಗೂ ಶ್ರೀ ಮಾರುತಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. 

   ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಶಿವಾನಂದ ದಳವಾಯಿ, ದೇವಸ್ಥಾನ ಕಮೀಟಿಯ ತವನಪ್ಪ ಬದ್ನಿಕಾಯಿ, ವರ್ಧಮಾನ ಸದಲಗಿ, ಮನ್ವಿತ್ ಅರಕೇರಿ, ಸಂಜು ಗುರವ, ಪ್ರಕಾಶ ಉಮರಾಣಿ, ರಾಜಕುಮಾರ ಉಮರಾಣಿ, ರಾಹುಲ್ ಉಮರಾಣಿ, ವಿನೋದ ಮಠಪತಿ, ರಾಜು ಹೆಗ್ಗೊಂಡ, ಶಿವು ಚಿಂಚಲಿ, ಸಿದ್ದಪ್ಪ ಗವಣ್ಣವರ, ರಾಮಣ್ಣ ದಾಸರ, ವಿರುಪಾಕ್ಷಿ ಮಠಪತಿ, ಶಂಕರ ಪಾಟೀಲ, ಕಾಂತು ಬಾಡಗಿ, ಅಶೋಕ ಬಿಳ್ಳೂರ, ಪುಟ್ಟು ಬಾಗೇವಾಡಿ, ರವಿ ಹಂದಿಗುಂದ, ದತ್ತು ಗುರವ, ಮಂಜು ಝುಂಜರವಾಡ ಹಾಗೂ ಮತ್ತೀತರ ಗಣ್ಯರು ರಥೋತ್ಸವದಲ್ಲಿ ಉಪಸ್ಥಿತರಿದ್ದರು.