ಚಂದ್ರಯಾನ-4 ಮತ್ತು ಗಗನ್‌ಯಾನ್‌ಗಳು ಇಸ್ರೋ ಪ್ರಮುಖ ಕಾರ್ಯಗಳಲ್ಲಿ ಸೇರಿವೆ: ಇಸ್ರೋ ನೂತನ ಅಧ್ಯಕ್ಷ ವಿ.ನಾರಾಯಣನ್

Chandrayaan-4 among ISRO's flagship missions: ISRO's new chairman V. Narayanan

ತಿರುವನಂತಪುರಂ8 : ಇಸ್ರೋ ಯಶಸ್ವಿಯಾಗಿ ಸಾಗುತ್ತಿದೆ ಮತ್ತು ಚಂದ್ರಯಾನ-4 ಮತ್ತು ಗಗನ್ಯಾನ್ಗಳು ಮುಂದಿನ ಪ್ರಮುಖ ಕಾರ್ಯಗಳಲ್ಲಿ ಸೇರಿವೆ ಎಂದು ಪ್ರಖ್ಯಾತ ರಾಕೆಟ್ ವಿಜ್ಞಾನಿ ಮತ್ತು ನೂತನವಾಗಿ ನೇಮಕಗೊಂಡ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಬುಧವಾರ ಹೇಳಿಕೆ ನೀಡಿದ್ದಾರೆ.

ವಿ. ನಾರಾಯಣನ್ ಅವರು ಜ. 14ರಂದು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ಇಸ್ರೋ ಅಧ್ಯಕ್ಷರಾಗಿ ತಮ್ಮ ಹೊಸ ಅವಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ನಾರಾಯಣನ್, ಹಿಂದೆ ಮಹಾನ್ ನಾಯಕರ ನೇತೃತ್ವದ ಇಂತಹ ಮಹಾನ್ ಸಂಸ್ಥೆಯ ಭಾಗವಾಗಿರುವುದನ್ನು ದೊಡ್ಡ ಅದೃಷ್ಟವೆಂದು ಪರಿಗಣಿಸುತ್ತೇನೆ ಎಂದರು.

ನಾರಾಯಣನ್, ‘ನನ್ನ ನೇಮಕಾತಿಯ ಮಾಹಿತಿಯನ್ನು ಮೊದಲು ಪ್ರಧಾನ ಮಂತ್ರಿಗಳ ಕಚೇರಿಯಿಂದ ನನಗೆ ರವಾನಿಸಲಾಗಿದೆ. ಪ್ರಧಾನಿ ಎಲ್ಲವನ್ನೂ ನಿರ್ಧರಿಸುತ್ತಿದ್ದಾರೆ. ಹಾಲಿ ಅಧ್ಯಕ್ಷ ಎಸ್.ಸೋಮನಾಥ್ ಸರ್ ಕೂಡ ಕರೆ ಮಾಡಿ ನೇಮಕ ಮಾಡಿರುವ ವಿಚಾರ ಹೇಳಿದರು’ ಎಂದರು.

ಡಿಸೆಂಬರ್ 30 ರಂದು ಬಾಹ್ಯಾಕಾಶ ಡಾಕಿಂಗ್ ಪ್ರಯೋಗ ಮಿಷನ್ ಅನ್ನು ಪ್ರಾರಂಭಿಸಿದೆ.  ಉಪಗ್ರಹಗಳ ಡಾಕಿಂಗ್ ಪ್ರಯೋಗ ಜನವರಿ 9 ರಂದು ನಡೆಯಲಿದೆ. ಗಗನ್‌ಯಾನ್ ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿದೆ, ಅದರ ಭಾಗವಾಗಿ ಸಿಬಂದಿ ಇಲ್ಲದ ಮಾಡ್ಯೂಲ್ ಅಥವಾ ಅನ್‌ಕ್ರೂಡ್ ರಾಕೆಟ್‌ನ ಉಡಾವಣೆಗೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗಿ ಪ್ರಗತಿಯಲ್ಲಿವೆ” ಎಂದರು.

2022, ಜನವರಿಯಲ್ಲಿ ಡಾ. ಕೆ ಶಿವನ್ ಅವರಿಂದ ಡಾ. ಸೋಮನಾಥ್ ಅವರು ಅಧಿಕಾರ ಸ್ವೀಕರಿಸಿದ್ದರು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಅತ್ಯಂತ ನಿರ್ಣಾಯಕ ಘಟ್ಟಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು.

ನಿಮಗೆಲ್ಲರಿಗೂ ತಿಳಿದಂತೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಪ್ರಧಾನಿ ಅನುಮೋದನೆ ನೀಡಿದ್ದಾರೆ. ಬಾಹ್ಯಾಕಾಶ ನಿಲ್ದಾಣ ಐದು ಮಾಡ್ಯೂಲ್‌ಗಳನ್ನು ಹೊಂದಿರುತ್ತದೆ. ಈ ಪೈಕಿ ಮೊದಲಯನೇಯದು 2028ರಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.