ಚಂದ್ರಯಾನ-2 ನೌಕೆ ಚಂದ್ರನ ಒಡಲು ಸೇರಲು ಕ್ಷಣಗಣನೆ..!

ಬೆಂಗಳೂರು, ಸೆಪ್ಟೆಂಬರ್ 6:    ಚಂದ್ರಯಾನ ನೌಕೆ ಶುಕ್ರವಾರ  ತಡರಾತ್ರಿ ಚಂದಿರನ ಅಂಗಳದಲ್ಲಿ ಇಳಿಯಲಿದೆ. ಈ ಅಪರೂಪದ ಸನ್ನಿವೇಶ ವೀಕ್ಷಿಸಲು, ಕೇಳಲು  ದೇಶದ ಕೋಟಿ ಕೋಟಿ ಜನರು ಉತ್ಸುಕರಾಗಿದ್ದಾರೆ.   ಇದಕ್ಕಾಗಿ ಇಂದೇ ಪ್ರಧಾನಿ ನರೇಂದ್ರ ಮೋದಿ  ಇಂದೇ ಬೆಂಗಳೂರಿಗೆ  ಆಗಮಿಸುತ್ತಿದ್ದಾರೆ ಜೊತೆಗೆ 70 ವಿದ್ಯಾರ್ಥಿಗಳ ಸಂವಾದ  ಸಂವಾದ ನಡೆಸಲಿದ್ದಾರೆ.  ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಹೊಸ ತ್ರಿವಿಕ್ರಮ ಬರೆಯುವ  ಬೃಹತ್ ಯೋಜನೆ ಸಾಕಾರಗೊಳ್ಳುವ ಅಪರೂಪದ ಕ್ಷಣ ಸಮೀಪಿಸಿದೆ. ಕೆಲವೇ ಕೆಲವು ಗಂಟೆಗಳಲ್ಲಿ  ಚಂದ್ರಯಾನ-2 ನೌಕೆ ಚಂದ್ರನ ಒಡಲು ಸೇರಲಿದೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತು ಈ ಸಾಧನೆಯ ಕ್ಷಣಕ್ಕೆ ಕೂತುಹಲದಿಂದ  ಕಾಯುತ್ತಿದೆ.   ವಿಕ್ರಮ್ ಹೆಸರಿನ ಲ್ಯಾಂಡರ್  ನೌಕೆ ಚಂದ್ರನ ದಕ್ಷಿಣ ಧ್ರವದಲ್ಲಿ  ತಡರಾತ್ರಿ 1.30 ರಿಂದ 2.30 ನಡುವೆ ಇಳಿಯಲಿದೆ.    ಆದರೆ ಚಂದ್ರನ ದಕ್ಷಿಣ ಧ್ರವಕ್ಕೆ ಕಾಲಿಡುವ ಯೋಜನೆ ಬಹಳ ವಿನೂತನವಾದ್ದು  ಇಸ್ರೋದ ಈ ಯೋಜನೆ ವಿಶಿಷ್ಟವಾದುದು. ಇದುವರೆಗೂ ಚಂದ್ರನ ದಕ್ಷಿಣ ಧ್ರುವ ಹೇಗಿದೆ? ಅಲ್ಲಿ ಏನೇನಿದೆ?  ಎಂಬುದು ಜಗತ್ತಿಗೆ ತಿಳಿದಿಲ್ಲ. ಅದನ್ನು ಗಮನಿಸುವ, ಭೇದಿಸುವ ಪ್ರಯತ್ನವನ್ನೂ ಯಾವುದೇ ದೇಶ ಈವರೆಗೆ ಮಾಡಿರಲಿಲ್ಲ. ಈ ಸಾಧನೆ ಮಾಡುತ್ತಿರುವುದು ಭಾರತ ಮಾತ್ರ. ಹೀಗಾಗಿಯೇ ಇದಕ್ಕೆ  ಹೆಚ್ಚು ಕಿಮ್ಮತ್ತು ಬಂದಿದೆ.