ಚಂದ್ರಶೇಖರ ಶ್ರೀಗಳ ಆಶೀವರ್ಾದ ಪಡೆದ ಅಂಗಡಿ

ಲೋಕದರ್ಶನ ವರದಿ 

ಬೆಳಗಾವಿ 24:  ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಂದ ಸಟರ್ಿಫಿಕೆಟ್ ಬಂದಾಗಿದೆ. ಸರಕಾರದಿಂದ ಅಧಿಕೃತವಾಗಿ ಸಟರ್ಿಫಿಕೇಟ್ ಬರಬೇಕಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಗುರುವಾರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿದ್ದಂತೆ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ತೆರಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀವರ್ಾದ ಪಡೆದು ಮಾತನಾಡಿದರು.

ಹುಕ್ಕೇರಿಯ ಹಿರೇಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿರುವುದು ಶ್ರೀಗಳ ಆಶೀವರ್ಾದಿಂದ. ಸ್ವಾಮೀಜಿಗಳು ನನಗೆ ಈಗಾಗಲೇ ಸಟರ್ಿಫಿಕೆಟ್ ನೀಡಿದ್ದಾರೆ. ಅಧಿಕೃತವಾಗಿ ಸರಕಾರದಿಂದ ಸಟರ್ಿಫಿಕೆಟ್ ನೀಡುವುದು ಬಾಕಿಯಿದೆ ಎಂದರು.

ಹುಕ್ಕೇರಿ ಹಿರೇಮಠ ಚಂದ್ರಶೇಖ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸತತ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಪ್ರೀಯ ಸಂಸದರಾಗಿ ಹೊರಮ್ಮಿರುವ ಸುರೇಶ ಅಂಗಡಿ ಅವರು ನಾಲ್ಕನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಅಂಗಡಿ ಅವರಿಗೆ ಸಚಿವ ಸ್ಥಾನ ಲಭಿಸಲಿ ಎಂದು ಶ್ರೀಗಳ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ನಿರಲಿಗಿಮಠ, ಮುಕ್ತಾರ ಪಠಾಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು