ಸಂಬರಗಿ 31: ಗ್ರಾಮದ ಚಂದ್ರಗಿರಿ ದೇವಿ ಜಾತ್ರಾ ಮಹೋತ್ಸವ ಮೇ ತಿಂಗಳಲ್ಲಿ ನಡೆಯುತ್ತಿರುವ ಪ್ರಯುಕ್ತ ಜಾತ್ರಾ ಕಮಿಟಿಯ ಪೂರ್ವಭಾವಿ ಸಭೆಯನ್ನು ಚಂದ್ರಗಿರಿ ದೇವಿಯ ಮಂದಿರದಲ್ಲಿ ಜಾತ್ರಾ ಕಮಿಟಿ ನೂತನ ಪದಾಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತಿಯಲ್ಲಿ ನಡೆಯಿತು. ಕಳೆದ ವರ್ಷದ ಖರ್ಚು ವೆಚ್ಚ ಹೇಳಿ ಈ ವರ್ಷದ ಜಾತ್ರೆ ಬಗ್ಗೆ ಚರ್ಚೆ ಪ್ರಾರಂಭ ಮಾಡಿದರು.
ಈ ವೇಳೆ ಜಾತ್ರಾ ಕಮಿಟಿ ಮುಖ್ಯಸ್ಥರಾದ ತುಕಾರಾಮ್ ಸೇಳಕೆ ಮಾತನಾಡಿ ಗ್ರಾಮದ ಪ್ರತಿ ಕುಟುಂಬದ ಪ್ರಮುಖರು ಪ್ರತಿ ವರ್ಷ 501 ರೂಪಾಯಿ ಜಾತ್ರಾ ಕಮಿಟಿಯ ಪಟ್ಟಿ ನೀಡಬೇಕು ಅದೇ ಪ್ರಕಾರ ಚಂದ್ರಗಿರಿ ದೇವಿಯ ಕಟ್ಟಡ ಕೆಲಸಕ್ಕೆ ಎಲ್ಲರೂ ಆರ್ಥಿಕ ನೆರವು ನೀಡಿ ಬೇಕೆಂದು ವಿನಂತಿಸಿದರು
ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ್ ಬೈಲಾಟ ಮರಾಠಿ ಲೋಕನಾಟ್ಯ ತಮಾಶಾ ವಿವಿಧ ಸ್ಪರ್ಧೆಗಳು ಏರಿ್ಡಸಲಾಗಿದೆ. ಬಹುಮಾನ ನೀಡುವ ವ್ಯಕ್ತಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಮನವಿ ಮಾಡಿಕೊಂಡರು.
ರಾಷ್ಟ್ರಿಯ ಕುಸ್ತಿಪಟು ದಿವಂಗತ ಧನಾಜಿ ಟೋಣಿ ಇವರ ಸ್ಮರಣಾರ್ಥಕವಾಗಿ ಅವರ ಮಗ ವಿಜಯ ಟೋನಿ ಇವರಿಂದ ಎಲ್ಲಾ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದಿರುವ ಮೂರು ಜನರಿಗೆ ಸ್ಮೃತಿ ಚಿನ್ನ ನೀಡಿ ಗೌರವಿಸಲಾಗುವುದು. ಗ್ರಾಮಸ್ಥರೆಲ್ಲರ ಸಹಕಾರದಿಂದ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.
ಈ ವೇಳೆ ಪಿಕೆಪಿಎಸ್ ಉಪಾಧ್ಯಕ್ಷ ಅಣ್ಣಪ್ಪ ಮೀಸಾಳ, ಪಿಕೆಪಿಎಸ್ ಸಂಘದ ನಿರ್ದೇಶಕರಾದ ರಾಜು ಪಾಸಲಿ ಸಂಜಯ್ ಕಾಂಬಳೆ, ಸರ್ಜರಾವ್ ಸುರಡೇ, ಗ್ರಾಮ ಪಂಚಾಯತ್ ಸದಸ್ಯ ಪೋಪೋಟ ಬಂಡಗರ, ಸಿದ್ದು ಕೋಳಿ ಗ್ರಾಮ ಪಂಚಾಯತಿ ಸದಸ್ಯರಾದ ಅಮೃತ್ ಮೀಸಾಳ ಅಬ್ದುಲ್ ಮುಲ್ಲಾ, ದಗಡು ಸನಾದಿ ಅನ್ನಸಾಬ್ ಜಾದವ್ ರಾಮ್ ಪಾಟೀಲ್ ಜಿತು ನರುಟೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.