ಚಂದಸಾಬ್ ಗಡಗಲವ ಅವರಿಗೆ ಕಾಂಗ್ರೆಸ್‌ನಲ್ಲಿ 40 ವರ್ಷಗಳ ಸೇವೆಗಾಗಿ ಗೌರವ

ಚಂದಸಾಬ್ ಗಡಗಲವ ಅವರಿಗೆ ಕಾಂಗ್ರೆಸ್‌ನಲ್ಲಿ 40 ವರ್ಷಗಳ ಸೇವೆಗಾಗಿ ಗೌರವ  Chandasab Gadagalava honored for 40 years of service in Congress

ವಿಜಯಪುರ  16: ಇಂದು ವಿಜಯಪುರ ಜಿಲ್ಲೆಯ ಹಿರಿಯ ಹಾಗೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾದ ಚಾಂದಸಾಬ್ ಗಡಗಲಾವ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ಸೇವೆಗಾಗಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಜನಾಬ್ ಶಕೀಲ್ ಬಾಗಮಾರೆ ಮಾತನಾಡುತ್ತಾ  

“ಇತ್ತೀಚೆಗೆ ಹಲವರು ಪಕ್ಷದಲ್ಲಿ ಬರುತ್ತಾರೆ. ಆದರೆ ಅಧಿಕಾರ ದೊರೆಯದಿದ್ದರೆ, ರಾತ್ರಿ ನಿದ್ರೆಗೆ ಹೋಗುವಂತೆ ಪಕ್ಷವನ್ನೇ ತೊರೆದು ಬಿಡುತ್ತಾರೆ. ಆದರೆ ಚಾಂದಸಾಬ್ ಗಡಗಲಾವ ಅವರು ಒಬ್ಬ ನಿಷ್ಠಾವಂತ ಪ್ರಾಮಾಣಿಕ ನಾಯಕ. ಕಳೆದ 40 ವರ್ಷಗಳಲ್ಲಿ ಪಕ್ಷವು ಇವರಿಗೆ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಹುದ್ದೆ ನೀಡಿಲ್ಲವಾದರೂ ಕೂಡಾ ಅವರು ಪಕ್ಷವನ್ನು ತೊರೆದಿಲ್ಲ. ಇಂತಹ ನಿಷ್ಠಾವಂತ ನಾಯಕರೇ ಇವತ್ತಿನ ಕಾಂಗ್ರೆಸ್‌ಗೆ ಅಗತ್ಯ. ಇಂದು ಯುವಕರಿಗೆ ಇಂಥವರಿಂದ ಕಲಿಯುವ ಅಗತ್ಯವಿದೆ.”  

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ್ ಗಡಗಲಾವ ರವರು ಮಾತನಾಡುತ್ತಾ “ನಾನು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವಿಭಾಗಗಳಲ್ಲಿ ಹುದ್ದೆ ಪಡೆದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯನಿರವಹಿಸುತ್ತಾ ಇದ್ದೇನೆ. ನಮ್ಮ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ಎಂ. ಬಿ. ಪಾಟೀಲ್ ಸಾಹೇಬರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಸುನೀಲಗೌಡ ಪಾಟೀಲ್ ರವರು ಯಾವಾಗಲೂ ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಂತವರು. ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಮುಸ್ಲಿಂ ಸಮುದಾಯದ ಜನರು ತಮ್ಮ ಕಚೇರಿಗೆ ಬರಬಾರದು ಎಂದು ಹೇಳಿದಾಗ, ಶ್ರೀ ಎಂ.ಬಿ. ಪಾಟೀಲ್ ಮತ್ತು ಸುನಿಗೌಡ ಪಾಟೀಲ್ ಅವರು ಮುಸ್ಲಿಂ ಜನತೆಗೆ ನೀವು ನಮ್ಮ ಬಳಿಗೆ ಬನ್ನಿ, ನಿಮ್ಮ ಎಲ್ಲ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಧೈರ್ಯ ತುಂಬಿದರು. ಇವರು ಏಕೈಕ ನಾಯಕರು ಹಿ ಯಾವಾಗಲೂ ಅಹಿಂದ ಸಮಾಜಕ್ಕಾಗಿ ನಿಂತವರು. ಇಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಎಂಬ ಕಾರಣದಿಂದಲೇ ನಾನು 40 ವರ್ಷಗಳಿಂದ ಈ ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ನಿಷ್ಠಾವಂತನಾಗಿ ಸೇವೆ ಸಲ್ಲಿಸುತ್ತಾ ಇದ್ದೇನೆ ಎಂದು ಹೇಳಿದರು.