ಚಂದರಗಿ, ನ್ಯಾ. ಕೆ.ಎಲ್. ಮಂಜುನಾಥ ನಡುವೆ ವಾಗ್ವಾದ

ಬೆಳಗಾವಿ : ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕನರ್ಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ವ್ಯಾಪ್ತಿಯ ಬಗ್ಗೆ ಕರೆಯಲಾದ ಕನ್ನಡಪರ ಸಂಘಟನೆಗಳ ಹಾಗೂ ಹೋರಾಟಗಾರರ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮತ್ತು ಆಯೋಗದ ಅಧ್ಯಕ್ಷ ನ್ಯಾ. ಕೆ.ಎಲ್. ಮಂಜುನಾಥ ಅವರ ನಡುವೆ ತೀವ್ರವಾದ ವಾಗ್ವಾದ ನಡೆದ ಘಟನೆ ಜರುಗಿತು. 

ಸೋಮವಾರ ಜಿಲ್ಲಾ ಪಂಚಾಯತ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯ ನಾಯಕರು ಬಂದು ಪದೇ ಪದೇ ನಗರಕ್ಕೆ ಆಗಮಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತು ಗಡಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಉಪಟಳ ಹೆಚ್ಚಿರುವಾಗ, ಅವರ ಅಟಾಟೋಪಗಳಿಗೆ ಪ್ರತಿಕ್ರಿಯಿಸಬೇಕಾದ ಆಯೋಗ, ಅದಕ್ಕೂ ತನಗೂ ಸಂಬಂಧ ಇಲ್ಲದಂತೆ ಬೆಂಗಳೂರಿನಲ್ಲಿ ಕುಳಿತಿದೆ ಎಂದು ಅಶೋಕ ಚಂದರಗಿ ಆಪಾದಿಸಿದರು.

ಹಿಂದೆ ನ್ಯಾಯಮೂತರ್ಿ ವಿ. ಎಸ್. ಮಳಿಮಠ ಅವರನ್ನು ಕನರ್ಾಟಕ ಗಡಿ ಕಾವಲು ಸಮಿತಿ ಅಧ್ಯಕ್ಷರಾಗಲು ಕೋರಲಾಗಿತ್ತು. ಆದರೆ, ಗಡಿ ಕಾವಲು ಸಮಿತಿಯ ವ್ಯಾಪ್ತಿ ಸೀಮಿತವಾಗಿರುವುದರಿಂದ ಮಳಿಮಠ ಅವರು ಅದನ್ನು ನಿರಾಕರಿಸಿದರು. ಬಳಿಕ, ಸಮಿತಿಗೆ ಹೆಚ್ಚಿನ ಅಧಿಕಾರ ನೀಡಿ ಅದನ್ನು ಕನರ್ಾಟಕ ಗಡಿ ರಕ್ಷಣಾ ಆಯೋಗ ಎಂದು ಬದಲಾಯಿಸಲಾಯಿತು. ಆಗ ಹುದ್ದೆಯನ್ನು ಸ್ವೀಕರಿಸಿದ್ದ ನ್ಯಾಯಮೂತರ್ಿ ಮಳಿಮಠ ಅವರು, ಕನ್ನಡ ವಿರೋಧಿ ಚಟುವಟಿಕೆಗಳ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಆಯೋಗಕ್ಕೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದರು ಎಂದು ಪ್ರತಿಪಾದಿಸಿದರು ಎಂದು ಚಂದರಗಿ ಅವರು ಸಭೆಯಲ್ಲಿ ವಿವರಿಸಿದರು.

ಆಯೋಗವು ಸದ್ಯದ ಬೆಂಗಳೂರಿನಲ್ಲಿ ಕುಳಿತು ಕೆಲಸ ಮಾಡುತ್ತಿದೆ. ಗಡಿಯಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೂ, ಆಯೋಗಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವತರ್ಿಸುತ್ತಿದೆ. ಇದರಿಂದ ಗಡಿ ಕನ್ನಡಿಗರಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ. ಇಲ್ಲಿಯ ಶಾಸಕರು, ಮಂತ್ರಿಗಳು, ಕೇಂದ್ರ ಮಂತ್ರಿಗಳು ಎಂಇಎಸ್ ಬಗ್ಗೆ ಮಾತನಾಡುವುದಿಲ್ಲ. ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಸೀಮಿತ ಅಧಿಕಾರವಿದೆ. ಆದರೂ ಅವರು ತಮ್ಮ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇದನ್ನೆಲ್ಲ ನೋಡಿಕೊಳ್ಳಬೇಕಾದ ಆಯೋಗ ಬೆಂಗಳೂರಿನಲ್ಲಿದೆ. ಅದರ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡುವಂತೆ ನಮ್ಮ ಹೋರಾಟ ನಡೆತಾ ಇದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಚಂದರಗಿ ಅವರು ತಮ್ಮ ಅಸಮಾಧಾನ ಹೊರಹಾಕಿದರು.

ಇದೇ ಸಂದರ್ಭದಲ್ಲಿ ಮಾಜಿ ಮಹಾಪೌರ ಹಾಗೂ ಹಿರಿಯ ಕನ್ನಡ ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿ, ಇಲ್ಲಿನ ಸುವರ್ಣ ವಿಧಾನ ಸೌಧ ದೆವ್ವದ ಮನೆಯಾಗುವುದು ಒಂದೇ ಬಾಕಿ ಇದೆ. ಅಲ್ಲಿ ಗಡಿ ರಕ್ಷಣಾ ಆಯೋಗದ ಕಚೇರಿಯನ್ನು ಸ್ಥಳಾಂತರಿಸಬೇಕೆಂದು ಕೋರಿದರು. ಇದೇ ವೇಳೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಅವರು ಮಾತನಾಡಿ, ಆಯೋಗವು ಗಡಿ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಕನ್ನಡ ಕಾರ್ಯಕರ್ತರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಸಕರ್ಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು. 

ಕನ್ನಡಪರ ಹೋರಾಟಗಾರರ ಈ ಹೇಳಿಕೆಗಳಿಗೆ ಉತ್ತರಿಸಿದ ನ್ಯಾಯಮೂತರ್ಿ ಕೆ. ಎಲ್. ಮಂಜುನಾಥ ಅವರು, ಆಯೋಗದ ವ್ಯಾಪ್ತಿಯು ನ್ಯಾಯಾಂಗದ ಕೆಲಸಗಳಿಗೆ ಮಾತ್ರ ಸೀಮಿತವಾಗಿದೆ. ಗಡಿ ಭಾಗದಲ್ಲಿ ನಡೆಯುವ ಪ್ರಚೋದನೆಗಳು ಮತ್ತು ಇತರೆ ಚಟುವಟಿಕೆಗಳ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಸಕರ್ಾರವು ಆಯೋಗಕ್ಕೆ ಯಾವುದೇ ವಿಶೇಷ ಅಧಿಕಾರ ನೀಡಿಲ್ಲ. ನನ್ನ ವ್ಯಾಪ್ತಿಗೆ ಬರುವ ವಿಷಯಗಳ ಕುರಿತು ಮಾತ್ರ ನಾನು ಪ್ರತಿಕ್ರಿಯಿಸಬಲ್ಲೆ ಎಂದರು. ಆಯೋಗದ ಅಧ್ಯಕ್ಷರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಚಂದರಗಿ ಅವರು, ನ್ಯಾಯಮೂತರ್ಿ ಮಳಿಮಠ ಅವರಿಗೆ ವಿಶೇಷ ಅಧಿಕಾರ ನೀಡಿದ್ದರಿಂದಲೇ ಅವರು ಈ ಹುದ್ದೆಯನ್ನು ವಹಿಸಿಕೊಂಡಿದ್ದರು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂತರ್ಿ ಮಂಜುನಾಥ ಅವರು ಅಯೋಗಕ್ಕೆ ಸಕರ್ಾರದಿಂದ ವಿಶೇಷ ಅಧಿಕಾರ ನೀಡಿರುವುದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಆದೇಶ ಇದ್ದರೆ ಕೊಡಿ ಎಂದು ಕೇಳಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಕೆಲಕಾಲ ಕಾವೇರಿದ ವಾತಾವರಣವು ಇಂದಿನ ಸಭೆಯಲ್ಲಿ ನಿಮರ್ಾಣವಾಯಿತು.

ಇದೇ ವೇಳೆ ನ್ಯಾವಾದಿ ರವೀಂದ್ರ ತೋಟಿಗೇರ, ಶ್ರೀನಿವಾಸ ತಾಳೂಕರ, ಅನಂತಕುಮಾರ ಬ್ಯಾಕೂಡ ಸೇರಿದಂತೆ ಅನೇಕರು ಮಾತನಾಡಿದರು. ಹಿರಿಯ ನ್ಯಾಯವಾದಿಗಳಾದ ಎಮ್.ಬಿ. ಝಿರಲಿ, ಎಂ.ಆರ್. ಕುಲಕಣರ್ಿ, ನಿವೃತ್ತ ನ್ಯಾಯಮೂತರ್ಿ ಜಿನದತ್ತ ದೇಸಾಯಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಲೋಕೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.