ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಮಾಡಿದ ಟ್ಯಾಕ್ಸಿ ಡ್ರೈವರ್

ಬೆಂಗಳೂರು, ಸೆ 22    ಇತ್ತೀಚೆಗೆ ಸಂಚಾರಿ ನಿಯಮ ಉಲ್ಲಂಘಿಸಿದ್ದ ಗೂಡ್ಸ್ ವಾಹನ ಚಾಲಕನೋರ್ವನಿಗೆ ನಗರ ಸಂಚಾರಿ ಪೊಲೀಸ್ ಪೇದೆ ಥಳಿಸಿದ್ದ ವಿಡಿಯೋ ವೈರಲ್ ಆದ  ಹಿನ್ನೆಲೆಯಲ್ಲಿ  ಮೈಸೂರಿನ ಟ್ಯಾಕ್ಸಿ ಚಾಲಕನೊರ್ವ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಓಪನ್ ಚಾಲೆಂಜ್ ಮಾಡಿದ್ದಾನೆ. 

ಮೈಸೂರಿನಿಂದ ವಿಡಿಯೋ ಮೂಲಕ  ಕಾರುಚಾಲಕ ಪೊಲೀಸರಿಗೆ ಚಾಲೆಂಜ್ ಮಾಡಿದ್ದಾನೆ. 

ತಾಕತ್ತಿದ್ರೆ ನನ್ನ ಕಾರ್ ತಡೆದು ಫೈನ್ ಹಾಕಿ. ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ನಾಲ್ಕು ವರ್ಷದ ಹಿಂದೆಯೇ ಎಲ್ಲಾ ಲ್ಯಾಪ್ಸ್ ಆಗಿದೆ . 

ನಾನು 2 ತಾರೀಕು ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ  ಬರಲಿದ್ದೇನೆ. ನನ್ನ ಕಾರು ನಂಬರ್ ಸಮೇತ ತೋರಿಸುತ್ತೇನೆ. ತಾಕತ್ ಇದ್ದರೇ ಹಿಡಿದು ದಂಡ ವಿಧಿಸಿ ಎಂದು  ಚಾಲೆಂಜ್ ಮಾಡಿದ್ದಾನೆ.