ಕೊಲ್ಹಾಪುರ 29: ಎಲ್ಲಾ ವಿಧದ ಈರುಳ್ಳಿ
ರಫ್ತು ಮಾಡುವು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರವು ಎಡವಿದೆ ಎಂದು ಸ್ವಾಭಿಮಾನಿ ಶೆಟ್ಕರಿ ಸಂಘಸ್ಥಾನದ
(ಎಸ್‌ಎಸ್‌ಎಸ್) ರಾಷ್ಟ್ರೀಯ ಅಧ್ಯಕ್ಷ ಮತ್ತು ಹಿರಿಯ ಶೆಟ್ಕರಿ ಮುಖಂಡ, ಮಾಜಿ ಸಂಸದ ರಾಜುಶೆಟ್ಟಿ
ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಈರುಳ್ಳಿಯ ಅಂತಾರಾಷ್ಟ್ರೀಯ
ಬೆಲೆಗಳು ಹೆಚ್ಚಾಗಿದೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿಯೂ ಸಹ ಬೆಲೆ ಹೆಚ್ಚಾಗಿದೆ, ತರಕಾರಿ ರಫ್ತಿಗೆ
ನಿಷೇಧ ಹೇರುವ ಮೂಲಕ ಸರ್ಕಾರವು ತಪ್ಪೆಸಗಿದೆ" ಎಂದು ಹೇಳಿದರು.
ಮುಂದಿನ ತಿಂಗಳು ಬರಲಿರುವ 'ಖಾರಿಫ್' ಬೆಳೆ ಪರಿಗಣಿಸಿ ಈರುಳ್ಳಿ
ರಫ್ತು ನಿಷೇಧಿಸುವ ಈ ನಿರ್ಧಾರವು ಈರುಳ್ಳಿ ಬೆಳೆಗಾರರಿಗೆ ತೀವ್ರ ಪರಿಣಾಮ ಬೀರುತ್ತದೆ ಎಂದು ಶೆಟ್ಟಿ
ಅಭಿಪ್ರಾಯಪಟ್ಟರು.
ಸರ್ಕಾರದ ನಿಷೇಧದ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ
ಅವರು, ಸರ್ಕಾರವು ರೈತರ ಆರ್ಥಿಕ ಹಿತಾಸಕ್ತಿಗೆ ಒಳಪಡದಂತಹ ನಿರ್ಧಾರವನ್ನು ಏಕೆ ತೆಗೆದುಕೊಂಡಿತು ಎಂದು
ಪ್ರಶ್ನಿಸಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್
ಮತ್ತು ಇತರ ಸಚಿವರು ಭಾನುವಾರ ತೆರೆದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಈರುಳ್ಳಿಯ ಬೆಲೆಯನ್ನು ನಿಯಂತ್ರಣಕ್ಕೆ
ತರಲು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಬಗೆಯ ಈರುಳ್ಳಿಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದ್ದಾರೆ.