ಅನ್ನದಾನೀಶ್ವರ ವಿದ್ಯಾಸಮಿತಿಗೆ ಶತಮಾನೋತ್ಸವ-ಮಹಾದೇವ
Centenary of Annadanishwara Vidya Samiti - Mahadeva
ಅಳವಂಡಿ 09 : ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಮಠದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮಕ್ಕೇ ಮಠದ ಜಗದ್ಗುರು ಮಹಾಸನ್ನಿಧಿಯವರ ಸೇವೆ ಮತ್ತು ಕೊಡುಗೆ ಅಪಾರ ಎಂದು ಕುಕನೂರ ಬೆಟಗೇರಿ ಶಾಖಾಮಠದ ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು. ಅವರು ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ವಾರ್ಷಿಕೋತ್ಸವ ಮತ್ತು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಕಾರ್ಯಕ್ರಮದ ನೇತ್ರತ್ವ ವಹಿಸಿ ಮಾತನಾಡುತ್ತಾ ಬರಗಾಲ ಸಮಯದಲ್ಲಿ ಮುಂಡರಗಿ ಅನ್ನದಾನೀಶ್ವರ ಮಠ ಶೈಕ್ಷಣಿಕವಾಗಿ ಧಾರ್ಮಿಕವಾಗಿ , ಜಾತಿ ಮಥ ಪಂಥವೆನ್ನದೇ ಸರ್ವ ಸಮಾಜ ಅಭಿವೃದ್ಧಿಗೆ ಕೊಡುಗೆ ನೀಡಿದೆ, ನೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಶಿಕ್ಷಣ ಸಂಸ್ಥೆ ಮಠದ ಜಗದ್ಗುರುಗಳ ಸಾನಿಧ್ಯದಲ್ಲಿ ಬಹು ಎತ್ತರಕ್ಕೆ ಬೆಳೆದಿದೆ ಇಂತಹ ಅಭಿವೃದ್ಧಿ ಕಾರ್ಯಕ್ಕೆ ಮಠದ ಭಕ್ತರ ಸಹಕಾರ ಬಹಳ ದೊಡ್ಡದು ಅಂತಹ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ನಾವೇ ಧನ್ಯರು ಎಂದರು.
ನಂತರ ಮಾತಾನಾಡಿದ ತಾಪಂ ಮಾಜಿ ಸದಸ್ಯರ ವಿರೇಶ ಸಜ್ಜನ ಮುಂಡರಗಿ ಮಠವು ನಮ್ಮಂತ ಸಾಕಷ್ಟು ವಿಧ್ಯಾರ್ಥಿಗಳಿಗೆ ಉಚಿತ ಪ್ರಸಾದನಿಲಯಗಳನ್ನ ಸ್ಥಾಪಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಮಠವು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದೆ, ಪೂಜ್ಯರು ಸಾಧನೆ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಜೊತೆಗೆ ಹಲವಾರು ಯುವ ಸ್ವಾಮೀಜಿಗಳಿಗೆ ಪ್ರೇರಣ ಶಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿರುವುದ ಮತ್ತು ಇಂತಹ ಪೂಜ್ಯರು ನಮ್ಮ ಭಾಗದಲ್ಲಿ ಇರುವುದು ನಮ್ಮೇಲ್ಲರ ಸೌಭಾಗ್ಯ ಎಂದರು. ಹಿರಿಯರಾದ ಶಂಕ್ರ್ಪ ಬಡಿಗೇರ ಮಾತನಾಡಿ ನಮ್ಮ ಗ್ರಾಮದವರು ಮುಂಡರಗಿ ಪೀಠಕ್ಕೆ ಸ್ವಾಮೀಜಿಗಳಾಗಿ ಹಲವಾರು ಲೀಲೆಗಳನ್ನ ಮಾಡಿದ್ದನ್ನ ಕೇಳಿ ಸಂತೋಷ ವಾಗುತ್ತದೆ, ಅಂತಹ ಮಹಾನ ಪೂಜ್ಯರು ಪಡೆದ ನಮ್ಮ ಗ್ರಾಮವೇ ಪುಣ್ಯವೇ ಸರಿ, ಭಕ್ತನನ್ನ ಕೂಡ ಮಠವು ಜಗದ್ಗುರುಗಳನ್ನಾಗಿ ಮಾಡಿಕೊಂಡದ್ದು ಆ ಮಠದ ಭವ್ಯ ಪರಂಪರೆಯನ್ನು ತಿಳಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾನಿಧ್ಯವನ್ನ ಹಿರೇಸಿಂದೋಗಿ ಪೂಜ್ಯ ಚಿದಾನಂದ ಮಹಾಸ್ವಾಮಿಗಳು ವಹಿಸಿದ್ದರು. ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ ಪ್ರವಚನವನ್ನ ಕುಮಾರಸ್ವಾಮಿ ಶಾಸ್ತ್ರೀಗಳು ತೊಳಲಿ, ಸಂಗೀತ ಸೇವೆಯನ್ನು ಬಸವರಾಜ ಕುರಹಟ್ಟಿ, ವೆಂಕರಡ್ಡಿ ಕವಲೂರ ಮಾಡಿದರು. ಗ್ರಾಪಂ ಅಧ್ಯಕ್ಷ ದುರುಗಪ್ಪ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಮಡಿವಾಳರ, ಸದಸ್ಯ ಸಿದ್ದಣ್ಣ ಸಜ್ಜನ, ಹನುಮಗೌಡ ತಿಗರಿ, ರಾಮಣ್ಣ ತಿಗರಿ, ಅಂದಾನಯ್ಯ ಬೋಚನಹಳ್ಳಿ, ಗುರಯ್ಯ ಮೈನಳ್ಳಿ, ಪರಮೇಶಪ್ಪ ಕಂಚಿ,ಪ್ರಭು ಶಿವಸಿಂಪರ, ಬಸವರಾಜ ನಾಗರೆಡ್ಡಿ, ನವೀನಕುಮಾರ, ಮುತ್ತಯ್ಯ ಹಿರೇಮಠ, ಚಂಬಣ್ಣ ಕೊಪ್ಪಳ, ಮತ್ತು ಇತರರು ಇದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 