ಜನಗಣತಿ ಕಾರ್ಯ ನಿಖರ ಮಾಹಿತಿ ಸಂಗ್ರಹ

ಜನಗಣತಿ ಕಾರ್ಯ ನಿಖರ ಮಾಹಿತಿ ಸಂಗ್ರಹ Census work: collection of accurate information

ಲಕ್ಷ್ಮೇಶ್ವರ 22 ;  "ಅಡರಕಟ್ಟಿ ಜನಗಣತಿ ಕಾರ್ಯವು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಪ್ರಮುಖ ದಾಖಲೆಯಾಗಿದ್ದು, ಗಣತಿದಾರರು ಯಾವುದೇ ಲೋಪದೋಷಗಳಿಲ್ಲದಂತೆ ಅತ್ಯಂತ ನಿಖರವಾಗಿ ಮಾಹಿತಿ ದಾಖಲಿಸಬೇಕು ಎಂದು ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣತಿ ಮೇಲ್ವಿಚಾರಕರಾದ  ಜಿ.ಎಸ್‌. ಜಗಲಿ ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣತಿ ಕಾರ್ಯದ ಮಾರ್ಗದರ್ಶನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗಣತಿ ಕಾರ್ಯದ ವಿವಿಧ ಹಂತಗಳ ಬಗ್ಗೆ ಅವರು ಕುಲಂಕುಶವಾಗಿ ವಿವರಿಸಿದರು.ಗಮನಿಸಬೇಕಾದ ಪ್ರಮುಖ ಅಂಶಗಳು:ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಈ ಕೆಳಗಿನ ಮಾಹಿತಿಯನ್ನು ಕಡ್ಡಾಯವಾಗಿ ಪರೀಶೀಲಿಸಿ ದಾಖಲಿಸುವಂತೆ ಅವರು ಸೂಚಿಸಿದರು:ಕಟ್ಟಡ ಹಾಗೂ ನಿವಾಸದ ವಿವರ: ಸಾಲಿನ ಸಂಖ್ಯೆ, ಕಟ್ಟಡದ ಸಂಖ್ಯೆ ಮತ್ತು ಜನಗಣತಿ ಮನೆ ಸಂಖ್ಯೆಯನ್ನು ನಿಖರವಾಗಿ ಗುರುತಿಸುವುದು.ನಿರ್ಮಾಣ ಸಾಮಗ್ರಿ: ಮನೆಯ ನೆಲ, ಗೋಡೆ ಮತ್ತು ಮೇಲ್ಚಾವಣಿಗೆ ಬಳಸಲಾಗಿರುವ ಪ್ರಧಾನ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆಯುವುದು.ಬಳಕೆಯ ಉದ್ದೇಶ: ಜನಗಣತಿ ಮನೆಯನ್ನು ವಾಸಕ್ಕೆ ಅಥವಾ ಇತರೆ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಹಾಗೂ ಮನೆಯ ಈಗಿನ ಸ್ಥಿತಿಗತಿಯನ್ನು ದಾಖಲಿಸುವುದು.ಕುಟುಂಬದ ವಿವರ: ಕುಟುಂಬದ ಸದಸ್ಯರ ಸಂಖ್ಯೆ, ಕುಟುಂಬ ಮುಖ್ಯಸ್ಥರ ಹೆಸರು, ಲಿಂಗ ಮತ್ತು ಜಾತಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರೆ) ವಿವರಗಳನ್ನು ಸಂಗ್ರಹಿಸುವುದು.ಸೌಲಭ್ಯಗಳ ಲಭ್ಯತೆ: ಕುಡಿಯುವ ನೀರಿನ ಮೂಲ, ಬೆಳಕಿನ ವ್ಯವಸ್ಥೆ, ಶೌಚಾಲಯದ ಲಭ್ಯತೆ, ವಾಸದ ಕೊಠಡಿಗಳ ಸಂಖ್ಯೆ ಹಾಗೂ ಕುಟುಂಬದಲ್ಲಿರುವ ವಿವಾಹಿತ ದಂಪತಿಗಳ ವಿವರಗಳನ್ನು ಪಡೆಯುವುದು.ಪ್ರತಿ ಗಣತಿದಾರರು ಇಲಾಖೆ ನೀಡಿರುವ ಕೈಪಿಡಿಯನ್ನು ಸರಿಯಾಗಿ ಅಭ್ಯಸಿಸಬೇಕು. ಯಾವುದೇ ಒಂದು ಮಾಹಿತಿ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸುವುದು ನಿಮ್ಮ ಜವಾಬ್ದಾರಿ," ಎಂದು ಅವರು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಎಂ.ಎಸ್‌. ಹಿರೇಮಠ, ಪರಮೇಶ ಕಾಳಶೆಟ್ಟಿ, ಸುನಂದಾ ಹಿರೇಮಠ, ಲತಾ ಹಿರೇಮಠ, ಡಿ.ಡಿ. ಲಮಾಣಿ, ಎನ್‌.ಎನ್‌. ಶಿಗ್ಲಿ ಹಾಗೂ ಎಸ್‌.ಎಂ. ಕೌಜಗೇರಿ ಸೇರಿದಂತೆ ಹಲವು ಗುರುಮಾತೆಯರು ಮತ್ತು ಗಣತಿ ಸಿಬ್ಬಂದಿಗಳು ಹಾಜರಿದ್ದರು.