ಮಹಾಲಿಂಗಪುರ ಪಟ್ಟಣದಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಮಹಾಲಿಂಗಪುರ 26: ಪಟ್ಟಣದಾದ್ಯಂತ ಸಾರ್ವಜನಿಕರು, ವಿಧ್ಯಾರ್ಥಿಗಳು 76ನೇ ಗಣರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು.
ಮಹಾಲಿಂಗಪುರ ಪುರಸಭೆ ಅಧ್ಯಕ್ಷರಾದ ಯಲ್ಲನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿತು. ಸದಸ್ಯರಾದ ರವಿ ಜವಳಗಿ ಮತ್ತು ರಾಜು ಚಮಕೇರಿ ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಪುರಸಭೆ ಆಡಳಿತ ಸನ್ಮಾನಿಸಿ ಗೌರವಿಸಿತು.
ಧ್ವಜಾರೋಹಣದಲ್ಲಿ ಪುರಸಭೆ ಉಪಾಧ್ಯಕ್ಷರಾದ ಶೀಲಾ ರಾಜೇಶ. ಭಾವಿಕಟ್ಟಿ, ಸದಸ್ಯರಾದ ಶೇಖರ ಅಂಗಡಿ, ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಚನ್ನಬಸು ಯರಗಟ್ಟಿ, ರಾಜು ಗೌಡಪ್ಪಗೊಳ, ಬಸವರಾಜ ಬುರುಡ, ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಭಾವನಾ ಪಾಟೀಲ ಸ್ನೇಹಲ್ ಅಂಗಡಿ, ಅನಂತನಾಗ ಬಂಡಿ, ಲಕ್ಕಪ್ಪ ಭಜಂತ್ರಿ, ಅಪ್ಪಾಸಾಹೇಬ ನಾಲಬಂದ, ಬಸವರಾಜ ಕರೆಹೊನ್ನ, ಸುನೀಲಗೌಡ ಪಾಟೀಲ, ನಜೀರ ಝಾರೆ, ಮಹಾಲಿಂಗ ಮಾಳಿ, ಚನ್ನಬಸು ಹುರಕಡ್ಲಿ, ಸುನೀಲ ಕಡಪಟ್ಟಿ, ಕಾನಿಪ ಅಧ್ಯಕ್ಷ ಮಹೇಶ ಮಣ್ಣಯ್ಯನ್ನವರಮಠ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪಿ ವಾಯ್. ಸೊನ್ನದ, ಎಂ ಎಂ ಮುಗಳಖೋಡ, ಆರ್ ಎಸ್ ಹೂಗಾರ, ಎಸ್ ಜಿ ಅಳ್ಳಿಮಟ್ಟಿ, ಎಸ್ ಜಿ ಕತ್ತಿ, ಎಸ್ ಎಂ ಕಲಬುರ್ಗಿ, ರಾಮು ಮಾಂಗ, ಮಹಾಲಿಂಗ ಮಾಂಗ, ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ಪುರಸಭೆಯ ಎಸ್ ಎನ್. ಪಾಟೀಲ್ ಸ್ವಾಗತಿಸಿ, ರವಿ ಹಲಸಪ್ಪಗೋಳ ನಿರೂಪಿಸಿ, ಚಿದಾನಂದ ಮಠಪತಿ ವಂದಿಸಿದರು.
ಪಿಕೆಪಿಎಸ್ : ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಮಹಾಲಿಂಗಪ್ಪ ಪೂಜಾರಿ, ನಿರ್ದೇಶಕರಾದ ಈರ್ಪ ದಿನ್ನಿಮನಿ, ಅಶೋಕಗೌಡ ಪಾಟೀಲ್, ಶಿವಲಿಂಗ ಘಂಟಿ, ವಿಷ್ಣುಗೌಡ ಪಾಟೀಲ್, ಸಂಗಪ್ಪ ಡೋನಿ, ಹಣಮಂತ ಬುರುಡ, ಬಸವರಾಜ ಅರಳಿಕಟ್ಟಿ, ಮಲ್ಲಿಕಾರ್ಜುನ ಕುಳ್ಳೋಳಿ, ಶಿವಪ್ಪ ನಾಗನೂರ, ಶೈಲಾ ನಾಗನೂರು, ಸುರೇಖಾ ಸೈದಾಪುರ, ಊರಿನ ಮುಖಂಡರಾದ ಮಹಾಲಿಂಗಪ್ಪ ಕೋಳ್ಳಿಗುಡ್ಡ, ಪ್ರಕಾಶ ಅರಳಿಕಟ್ಟಿ, ಶಿವಬಸು ಗೌಂಡಿ ಭೀಮಶಿ ಗೌಂಡಿ, ಶ್ರೀಮಂತ ಹಳ್ಳಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಬೆಟಗೇರಿ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸಿ ಕೆ ಚಿಂಚಲಿ ಶಾಲೆ : ಸ್ಥಳೀಯ ನ್ಯೂ ಮಿಲೇನಿಯಂ ಎಜುಕೇಶನ್ ಸೊಸೈಟಿ ಸಿ ಕೆ ಚಿಂಚಲಿ ಶಾಲೆ ಆವರಣದಲ್ಲಿ 76ನೆಯ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಗುತ್ತೇದಾರರಾದ ಬಿ.ಜಿ ಗಾಣಿಗೇರ ನೆರವೇರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಕಾರ್ಯದರ್ಶಿ ಮಹಾಂತೇಶ ಚಿಂಚಲಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರರಾದ ರಾಮಣ್ಣ ಹಟ್ಟಿ ಮತ್ತು ಪತ್ರಕರ್ತ ಎಂ ಎಲ್ ತಟಗಾರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಾಂತೇಶ ಬುರಕ್ಲೆ, ರಾಮಚಂದ್ರ ಮೇತ್ರಿ, ಪೂಜಾ ಸಂಬಾಜಿ, ಭೀಮಾನಂದ ಒಂಟಗೋಡಿ, ಇದ್ದರು. ಸುರೇಶ ರೆಡ್ಡಿ ಗೋರಬಾಳ ಸ್ವಾಗತಿಸಿ, ಶಿಕ್ಷಕ ಅರ್ಜುನ ಚವ್ಹಾಣ ನಿರೂಪಿಸಿ, ವಂದಿಸಿದರು.
ದಾನಮ್ಮದೇವಿ ಮಹಿಳಾ ಸೊಸೈಟಿ: ಮಹಿಳಾ ದಾನಮ್ಮ ದೇವಿ ಸೊಸೈಟಿಯಲ್ಲಿ ಧ್ವಜಾರೋಹಣವನ್ನು ಅಧ್ಯಕ್ಷ ಅರುಣಾ ಅಂಗಡಿ ನೆರವೇರಿಸಿದರು. ನಿರ್ದೇಶಕರಾದ ಸ್ನೇಹಲ್ ಅಂಗಡಿ, ಲಕ್ಷ್ಮಿ ಅಂಗಡಿ, ಕಾರ್ಯದರ್ಶಿ ರೂಪಾ ಬಾಡಗಿ, ಸಿಬ್ಬಂದಿ ಜಯಶ್ರೀ ಘಟ್ನಟ್ಟಿ, ಅಪ್ಪು ದಂಡಿನ, ಅನೀಲ ಖವಾಶಿ ಭಾಗವಹಿಸಿದ್ದರು.