ಸಂಭ್ರಮದ ಈದ್ ಮಿಲಾದ್ ಭವ್ಯ ಮೆರವಣಿಗೆ

ಸಂಭ್ರಮದ ಈದ್ ಮಿಲಾದ್ ಭವ್ಯ ಮೆರವಣಿಗೆ Celebratory Eid Milad grand procession

ಹೂವಿನಹಡಗಲಿ 06:  ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.ಪಟ್ಟಣದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಹಜರತ್ ರಾಜಬಾಗ್ ಸವಾರ್ ದರಗಾ ಬಳಿ ಜಮಾವಣೆಗೊಂಡರು.

ಮಹ್ಮದ್ ಪೈಗಂಬರರಿಗೆ ಜೈಕಾರಹಾಕುತ್ತಾ ಮಕ್ಕಾ ಮದೀನ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆ ಪ್ರಾರಂಭಿಸಿದರು.ಪಟ್ಟಣದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯ ಮೆರವಣಿಗೆ ಜರುಗಿತು. ಪಟ್ಟಣದ ಎಲ್ಲ ಮಸೀದಿಗಳ ದೈವಸ್ಥರು, ಮೌಲ್ವಿಗಳು, ಮುತುವಲ್ಲಿಗಳು, ಅಂಜುಮನ್ ಮತ್ತು ಮಿಲಾದ್ ಕಮಿಟಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರವಾದಿ ಮುಹಮ್ಮದ್ ಪೈಗಂಬರರ 1500ನೇ ಜನ್ಮ ದಿನಾಚರಣೆ ಪ್ರಯುಕ್ತದರಗಾದಲ್ಲಿಏರ್ಪಡಿಸಲಾಗಿತ್ತು. ಅನ್ನಸಂತರೆ​‍್ಣಮಿಲಾದ್ ಕಮಿಟಿ ಪದಾ-ಧಿಕಾರಿಗಳಾದ ಬಿ. ಸದ್ದಾಂ, ಡಿ. ಜಾವೀದ್ ಬಾಷಾ, ಜಿ.ಮುಫೀಸ್, ಯು.ಜಿಲಾನ್, ಜೆ.ರಫಿ, ಕೆ.ಗೌಸ್ ಎನ್‌.ಇರ್ಫಾನ್, ಮುಖಂಡರಾದ ಮೊಹಿದ್ದೀನ್, ಮೋಸಿನ್ ಅಲಿ, ಎಸ್‌.ಶಫಿವುಲ್ಲಾ, ಹಂಪಸಾಗರ ಮಹ್ಮದ್ ರಫಿ ಇತರರು ಇದ್ದರು.