ಆರಾಧ್ಯ ದೈವ ತುರುಮುಂದಿ ಬಸವೇಶ್ವರರ ಮಹಾರಥೋತ್ಸವದ ಸಂಭ್ರಮ
Celebration of the Maharathotsava of the revered deity Turumundi Basaveshwara
ಲೋಕದರ್ಶನ ವರದಿ
ಕಂಪ್ಲಿ 21: ತಾಲ್ಲುಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಅರಾಧ್ಯದೇವರಾದ ಶ್ರೀ ತುರುಮುಂದಿ ಬಸವೇಶ್ವರ ಮಹಾರಥೋತ್ಸವವು ಬಸವೇಶ್ವರರ ಜಯಂತಿಯ ದಿನದಂದು ಸಂಜೆ ಸಡಗರ, ಸಂಭ್ರಮ, ಶ್ರದ್ದಾಭಕ್ತಿಯಿಂದ ಜರುಗಿತು. ಮಹಾರಥೋತ್ಸವದ ಅಂಗವಾಗಿ ಏ.19 ರಂದು ಕಳಸ, ಕುಂಭಗಳೊಂದಿಗೆ, ಗಂಗೆಸ್ಥಳ ಕಾರ್ಯಕ್ರಮವು ವೀರಗಾಸೆ, ಪುರವಂತರ ನೃತ್ಯ ಜರುಗಿತು. ನಂತರ ಶ್ರೀತುರುಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಕಲ್ಯಾಣೋತ್ಸವವು ಸಂಭ್ರಮದಿಂದ ಜರುಗಿತು. ಸೋಮವಾರ ಬೆಳಿಗ್ಗೆ ತುರುಮುಂದಿ ಬಸವೇಶ್ವರರ ಶಿಲಾಮೂರ್ತಿಗೆ ವಿವಿಧ ಅಭಿಷೇಕ, ಮಹಾಮಂಗಳಾರತಿ ಹಾಗೂ ಮಡಿತೇರನ್ನು ಎಳೆಯಲಾಯಿತು. ಸಂಜೆ ಮಂಗಲವಾದ್ಯಗಳು, ವಿವಿದ ಜಾನಪದ ಕಲಾತಂಡಗಳೊಂದಿಗೆ ಉತ್ಸವ ಮೂರ್ತಿಗಳಾದ ತುರುಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಪ್ರತಿಮೆಗಳನ್ನು ಮೆರವಣಿಗೆ ಮೂಲಕ ತಂದು ರಥದಲ್ಲಿಪ್ರತಿಪಷ್ಠಾಪಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಹಾರಥೋತ್ಸವದಲ್ಲಿ ಶಾಸಕ ಜೆ.ಎನ್.ಗಣೇಶ್ ಭಾಗವಹಿಸಿ ಸ್ವಾಮಿ ಆರ್ಶೀವಾದ ಪಡೆದರು. ಮಹಾರಥೋತ್ಸವದಲ್ಲಿ ಗ್ರಾಮದ ಮುಖಂಡರಾದ ಜಿ.ಲಿಂಗನಗೌಡ, ಅಳ್ಳಳ್ಳಿ ವಿರೇಶ್, ಜಿ.ಚಂದ್ರಶೇಖರಗೌಡ, ಜಿ.ಮಲ್ಲಿಗೌಡ, ಬಸವನಗೌಡ, ಜಿ.ಗಣೇಶಗೌಡ, ಕಡೇಮನಿ ಪಂಪಾಪತಿ, ಜಿ.ವೀರನಗೌಡ, ಅಮರೇಗೌಡ, ಚನ್ನವೀರ, ಬಸವ, ಮುತ್ತಯ್ಯ, ಚಿದಾನಂದಪ್ಪ , ಪುರೋಹಿತರಾದ ಗುರುತಾತ, ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ವಿವಿದ ಸಮಾಜದ ಮುಖಂಡರು ಭಾಗವಹಿಸಿದ್ದರು. ರಾತ್ರಿ ತುರುಮುಂದಿ ಬಸವೇಶ್ವರ ದೇವಸ್ಥಾನಕ್ಕೆ ಚಿಕ್ಕೆನಕೊಪ್ಪದ ಶಿವಶಾಂತವೀರ ಶರಣರು ಆಗಮಿಸಿ ಗ್ರಾಮದ ಭಕ್ತರಿಗೆ ಶುಭ ಆರ್ಶೀವಚನ ದಯಪಾಲಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 