ಕಾರಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಕಾರಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ  Celebration of Shivasharana Hadapada Appanna Jayanti at Karadagi Government Higher Primary School

ಸವಣೂರು 03: ತಾಲೂಕಿನ ಕಾರಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಎಫ್‌.ಆರ್‌. ಹಿರೇಮಠ ಅವರು, 12ನೇ ಶತಮಾನದ ಶ್ರೇಷ್ಠ ವಚನಕಾರರಾದ ಶಿವಶರಣ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಹಾಗೂ ಅನುಭವ ಮಂಟಪದ ಪ್ರಮುಖರಲ್ಲಿ ಒಬ್ಬರಾಗಿದ್ದರು ಎಂದು ತಿಳಿಸಿದರು.  

ಅಪ್ಪಣ್ಣ ಅವರು "ಪ್ರಿಯ ಚೆನ್ನಬಸವಣ್ಣ" ಅಂಕಿತದಲ್ಲಿ ಸುಮಾರು 240ಕ್ಕೂ ಅಧಿಕ ವಚನಗಳನ್ನು ರಚಿಸಿದ್ದು, ಅವರ ಧರ್ಮಪತ್ನಿ ಲಿಂಗಮ್ಮ ಅವರೂ ಪ್ರಸಿದ್ಧ ವಚನಗಾರ್ತಿಯಾಗಿದ್ದರು ಎಂದು ಹೇಳಿದರು.  ಹಡಪದ ಅಪ್ಪಣ್ಣ ಅವರ ಜೀವನ ಸಂದೇಶವಾದ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆ ಹಾಗೂ ವಚನಗಳನ್ನು ಓದಿ ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎ.ವಿ. ಬನ್ನಿಕಲ್, ಜಿ.ಎನ್‌. ಪಾಟೀಲ್, ಎಂ.ಎಚ್‌. ಮಾದರ, ಎಸ್‌.ಬಿ. ದೊಡ್ಡಮನಿ, ಯಶೋದಾ ಆರ್‌.ಎಚ್‌., ಮೇಘಾ ಡಿ. ಹತ್ತಿ, ಮಹಾದೇವಿ ಸವಣೂರು, ಅನ್ನಪೂರ್ಣ ತೊಂಡೂರ ಹಾಗೂ ಅಡುಗೆ ಸಿಬ್ಬಂದಿ ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.